ಹೆಬ್ಬಳ್ಳಿ ಅಜ್ಜನವರ ಜನ್ಮದಿನ :ಅ.೧೦ಕ್ಕೆ ಭಕ್ತರಿಂದ ತುಲಾಭಾರ

ಹೆಬ್ಬಳ್ಳಿ ಅಜ್ಜನವರ ಜನ್ಮದಿನ :ಅ.೧೦ಕ್ಕೆ ಭಕ್ತರಿಂದ ತುಲಾಭಾರ

ಬಾಗಲಕೋಟೆ:
ಬಾದಾಮಿ ತಾಲೂಕಿನ ಹೆಬ್ಬಳ್ಳಿಯ ಶ್ರೀ ಹೆಬ್ಬಳ್ಳಿ ಅಜ್ಜನವರ  ೮೨ನೇ ಹುಟ್ಟು ಹಬ್ಬ ಕಾರ್ಯಕ್ರಮ ಅ.೧೦ ರಂದು ಅದ್ಧೂರಿಯಾಗಿ ಜರುಗಲಿದೆ.

ಜನ್ಮದಿನದ ಭಾಗವಾಗಿ ೮೮,೮೯,೯೦,೯೧ ಹಾಗೂ ೯೨ನೇಯ ತುಲಾಭಾರ ಸೇವೆಗಳು‌ ಅಜ್ಜನವರ ಸ್ವ ಗೃಹದಲ್ಲಿ ನೆರವೇರಲಿವೆ. ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ‌.