ಹೊಂದಾಣಿಕೆ ಸಾಕು, ಹಿಂದುತ್ವ ಬೇಕು
*ವಿಜಯ ಸಂಕಲ್ಪ ಯಾತ್ರೆ ವೇಳೆ ಭಿತ್ತಿಪತ್ರ ಪ್ರದರ್ಶಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು *ತೇರದಾಳದಲ್ಲಿ ನಡೆದ ಘಟನೆ
ಬಾಗಲಕೋಟೆ:
ವಿಜಯ ಸಂಕಲ್ಪ ಯಾತ್ರೆಗಾಗಿ ಮಂಗಳವಾರ ತೇರದಾಳಕ್ಕೆ ಆಗಮಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೊಂದಾಣಿಕೆ ಸಾಕು, ಹಿಂದುತ್ವ ಬೇಕೆಂದು ಹಿಂದೂ ಕಾರ್ಯಕರ್ತರು ಭಿತ್ತಿ ಪತ್ರ ಪ್ರದರ್ಶಿಸಿರುವ ಘಟನೆ ನಡೆದಿದೆ.
ವಿಜಯಸಂಕಲ್ಪ ಯಾತ್ರೆ ತೆರಳುವ ಮಾರ್ಗದಲ್ಲಿ ಕಾರ್ಯಕರ್ತರು ಹಿಂದೂ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಸಾಕು, ಮತಾಂಧರಿಗೆ ಗೋರಿಬೇಕು, ತುಷ್ಟೀಕರಣ ಕಾಂಗ್ರೆಸ್ಸಿಗೆ ಇರಲಿ ರಾಷ್ಟ್ರೀಯತೆಯೊಂದಿಗೆ ಬಿಜೆಪಿ ಬೆಳೆಯಲಿ ಎಂಬ ಭಿತ್ತಿಪತ್ರ ಸೇರಿದಂತೆ ಸಾಲು, ಸಾಲು ಭಿತ್ತಿಪತ್ರಗಳನ್ನು ಪ್ರದರ್ಶಿಸಿರುವ ಘಟನೆ ನಡೆದಿದೆ. ಆದರೆ ಭಿತ್ತಿಪತ್ರ ಪ್ರದರ್ಶಿಸಲು ಮುಂದಾದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.