ರೈಲಿನಲ್ಲಿ ವಿಷಪೂರಿತ ದ್ರವ್ಯ ಸಿಂಪಡಣೆಯಿಂದ ಬಾಗಲಕೋಟೆಯ ಮಹಿಳೆ ಸಾವು

ರೈಲಿನಲ್ಲಿ ವಿಷಪೂರಿತ ದ್ರವ್ಯ ಸಿಂಪಡಣೆಯಿಂದ ಬಾಗಲಕೋಟೆಯ ಮಹಿಳೆ ಸಾವು

ನಾಡನುಡಿ ನ್ಯೂಸ್ 
ಬಾಗಲಕೋಟೆ ಫೆ.೧೪: 
ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಗೆ ವಿಷಪೂರಿತ ದ್ರವ್ಯವನ್ನು ಸಿಂಪಡಿಸಿದ್ದರಿAದ ಅಸ್ವಸ್ಥ ಮಹಿಳೆ ದಾರುಣ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಅಸುನೀಗಿರುವ ಮಹಿಳೆ ನಗರದ ಗಣ್ಯ ಕಾಸಟ ಕುಟುಂಬದ ಶ್ರೀಮತಿ ಯಶೋಧಾಬಾಯಿ ಶ್ಯಾಮಸುಂದರ ಕಾಸಟ(೬೪) ಎಂದು ಗುರುತಿಸಲಾಗಿದೆ. 

 ಮಹಾರಾಷ್ಟದ ಜಳಗಾಂವದಲ್ಲಿ ನಡೆಯಲಿರುವ ಸಂಬಂಧಿಕರ ಮದುವೆಗೆ ಶ್ಯಾಮಸುಂದರ ಅವರು ಪತ್ನಿ ಯಶೋಧಾಬಾಯಿ ಅವರೊಂದಿಗೆ ಶನಿವಾರ ಮದ್ಯಾಹ್ನ ಮುಂಬೈ ರೈಲಿನ ಮೂಲಕ ಹೊರಟಿದ್ದು ಸೋಲಾಪೂರದಲ್ಲಿ ಇಳಿಯಬೇಕಿತ್ತು.ರೈಲು ಹುಟಗಿ ದಾಟುತ್ತಿದ್ದಂತೆ ಶೌಚಾಲಯಕ್ಕೆ ಹೋಗಿದ್ದ ಯಶೋಧಾಬಾಯಿ ಅವರ ಮೇಲೆ ಕ್ರಿಮೀನಾಷಕ ಸ್ಪ್ರೇ ಮಾಡಿರುವ ಅನುಮಾನವಿದ್ದು ಅಲ್ಲಿಂದ ಬಂದು ಮಲಗಿದ್ದ ಪತಿಯನ್ನು ಎಬ್ಬಿಸಿ ನನಗೆ ತೊಂದರೆಯಾಗುತ್ತಿದೆ ನೀವು ಏಳಿ ನಾನು ಮಲಗುವೆ ಎಂದು ಹೇಳಿ ಮಲಗಿದವರು ಮತ್ತೆ ಎದ್ದೆ ಇಲ್ಲ. ರೈಲಿನ ಎಸ್೩ ಬೋಗಿಯಲ್ಲಿ ಕೇವಲ ಮೂರೇ ಪ್ರಯಾಣಿಕರಿದ್ದರೆಂದು ಹೇಳಲಾಗಿದೆ. 

 ಸೋಲಾಪೂರ ತಲಪುತ್ತಿದ್ದಂತೆ ಸೂಟಕೇಸ್‌ಗಳನ್ನು ಇಳಿಸಿ ಪತ್ನಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದ ಶ್ಯಾಮಸುಂದರ ಅವರು ಏಳದಿದ್ದಾಗ ಬೋಗಿ ಬಳಿ ಹಾಯ್ದು ಹೋಗುತ್ತಿದ್ದ ಪೊಲೀಸ ಪೇದೆಯನ್ನು ಕರೆದಿದ್ದಾರೆ ಅವರು ತಟ್ಟಿ ಎಬ್ಬಿಸುವ ಹೊತ್ತಿಗೆ ಅವರ ಕೆಳಗೆ ಬಿದ್ದಿದ್ದು ಕೂಡಲೇ ಆಂಬುಲೆನ್ಸ ಮೂಲಕ ಸೊಲ್ಲಾಪೂರದ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರು ಮೃತಪಟ್ಟಿದ್ದಾರೆ,ಸಿಂಪಡಣೆಯಾಗಿರುವ ದ್ರವ್ಯ ವಿಷಕಾರಿಯಾಗಿದ್ದು ಅದು ದೇಹ ಪ್ರವೇಶಿಸಿ ಎಲ್ಲ ಬಾಗವನ್ನು ನಾಶ ಮಾಡಿದೆ ಎಂದು ವೈದ್ಯರು ಹೇಳಿದ್ದು ಮರಣೋತ್ತರ ಪರೀಕ್ಷೆಯಲ್ಲಿ ನಿನ್ನೆ ರಾತ್ರಿ ೮ಗಂಟೆ ಹೊತ್ತಿಗೆ ಅವರು ಅಸುನೀಗಿದ್ದಾರೆಂದು ಹೇಳಲಾಗುತ್ತಿದೆ. 

 ನಾಲ್ವರು ಪುತ್ರಿಯರು, ಓರ್ವ ಪುತ್ರರನ್ನು ಅಗಲಿರುವ ಯಶೋಧಾಬಾಯಿ ಅವರ ಪಾರ್ಥಿವ ಶರೀರ ರಾತ್ರಿ ೧೦ ಗಂಟೆಗೆ ನಗರ ತಲುಪಿದ ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.