ಧರ್ಮ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಯೇ ಬಿಜೆಪಿಯ ಕಾರ್ಯಸೂಚಿ

ಧರ್ಮ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಯೇ ಬಿಜೆಪಿಯ ಕಾರ್ಯಸೂಚಿ
ಬಾಗಲಕೋಟೆ: ಈ ಚುನಾವಣೆ ಅಭಿವೃದ್ಧಿ ಮತ್ತು ಸುಳ್ಳಿನ ಕಂತೆಗಳ ಸೃಷ್ಟಿಕರ್ತರ ನಡುವಿನ ಚುನಾವಣೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಕಚೇರಿ ಬಳಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಎರಡು ಬಾರಿಯೂ ಸುಳ್ಳನ್ನೇ ಹೇಳಿ, ಮತದಾರರನ್ನು ಮರುಳು ಮಾಡಿ ಅಧಿಕಾರ ಹಿಡಿಯಿತು. ಆದರೆ ಈ ಬಾರಿ ಸುಳ್ಳುಗಳಿಗೆ ಮರುಳಾಗಿ ಮತ್ತೆ ಅವರಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸುಳ್ಳನ್ನು ಸತ್ಯ ಎಂದು ನಂಬಿಸುವ ವ್ಯವಸ್ಥಿತ ತಂಡ ಬಿಜೆಪಿಯಲ್ಲಿದೆ. ಹತ್ತು ವರ್ಷ ನರೇಂದ್ರ ಮೋದಿ ಅವರು ಸುಳ್ಳು ಹೇಳಿ ಕಾಲಹರಣ ಮಾಡಿದರು. ಆಡಳಿತ ವೈಫಲ್ಯವೇ ಅವರ ಸಾಧನೆ. ಆದರೂ ಮೋದಿ ಸರ್ಕಾರ ಏನೋ ಸಾಧನೆ ಮಾಡಿದೆ ಎಂದು ನಂಬಿಸುವAತೆ ಮಾರ್ಕೆಟಿಂಗ್ ಮಾಡುವ ತಂಡ ಬಿಜೆಪಿಯಲ್ಲಿದೆ. ನಾವು ಅವರನ್ನು ಅಂಧ ಭಕ್ತರು ಎಂದು ಕರೆಯುತ್ತೇವೆ ಎಂದರು. 
ಚಕ್ರವರ್ತಿ ಸೂಲಿಬೆಲೆ ಅವರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿ ಮಾತನಾಡಿದ್ದೇ ಮಾತನಾಡಿದ್ದು. ಆದರೆ ಅವರು ಹೇಳಿದ ಎಲ್ಲ ಮಾತುಗಳೂ ಸುಳ್ಳೇ. ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣವನ್ನು ಇದುವರೆಗೆ ಏಕೆ ತರಲಿಲ್ಲ ಎಂದು ಅವರನ್ನು ಪ್ರಶ್ನೆ ಮಾಡಬೇಕಿದೆ ಎಂದರು.
ಕಾAಗ್ರೆಸ್ ಕಾರ್ಯಕರ್ತರೂ ಕೂಡ ಬಿಜೆಪಿ ಮಾರ್ಕೆಟಿಂಗ್ ತಂಡದAತೆ ಕೆಲಸ ಮಾಡಬೇಕು. ಆದರೆ ಸುಳ್ಳು ಹೇಳುವ ಅಗತ್ಯವಿಲ್ಲ. ನಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಮತದಾರರಿಗ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು. 
ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ. ಆದರೆ ಸಂಕಲ್ಪ ಪತ್ರದಲ್ಲಿ ಪ್ರಸ್ತಾಪ ಮಾಡಿರುವ ವಿಷಯಗಳು ಅವರ ಡಿಕ್ಷನರಿಯಲ್ಲೇ ಇಲ್ಲ. ರೈತರು, ಯುವಕರು, ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆಯೇ ಬಿಜೆಪಿಗೆ ಇಲ್ಲ. ಹಲವು ಬೇಡಿಕೆಗಳ ಈಡೇರಿಕೆಗೆ ರೈತರು ಹೋರಾಟ ಮಾಡಿದರೆ ಸ್ಪಂದಿಸಲಿಲ್ಲ. ಮಣಿಪುರ ಸೇರಿದಂತೆ ದೇಶದ ಹಲವೆಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಕ್ರಮ ಕೈಗೊಳ್ಳಲಿಲ್ಲ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿ ಮಾತು ಕೃತಿಗೆ ಸಾಮ್ಯ ಇಲ್ಲದ ಕೇಂದ್ರ ಸರ್ಕಾರ ಎಂದು ಟೀಕೆ ಮಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಾಸಕರಾದ ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ಕೆಪಿಸಿಸಿ ಉಪಾಧ್ಯಕ್ಷರಾದ ಅಜಯಕುಮಾರ ಸರನಾಯಕ, ಎಂ.ಬಿ. ಸೌದಾಗಾರ್ ಮಾತನಾಡಿದರು.  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಕ್ಷಿತಾ ಈಟಿ, ಜಿಪಂ ಮಾಜಿ ಅಧ್ಯಕ್ಷೆ ಮಾಯಕ್ಕ ಮೇಟಿ ಮತ್ತಿತರರು ವೇದಿಕೆಯಲ್ಲಿದ್ದರು.