ರಾತ್ರಿ ೧೦ರೊಳಗಾಗಿ ಗಣೇಶ ವಿಸರ್ಜನೆ ಮಾಡಿ..!

* ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಸೂಚನೆ  * ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಶಾಂತತಾ ಸಮಿತಿ ಸಭೆ 

ರಾತ್ರಿ ೧೦ರೊಳಗಾಗಿ ಗಣೇಶ ವಿಸರ್ಜನೆ ಮಾಡಿ..!
ಬಾಗಲಕೋಟೆ:  ಜಿಲ್ಲೆಯಲ್ಲಿ ಸೆಪ್ಟೆಂಬರ ೭ ರಂದು ಆಚರಿಸಲ್ಪಡುವ ಗಣೇಶ ಉತ್ಸವವನ್ನು ಶಾಂತರೀತಿಯಿAದ, ಸಂಭ್ರಮ ಸಡಗರದಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಗಣೇಶ ಉತ್ಸವ ಮಂಡಳಿಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿಂದು ಗಣೇಶ ಉತ್ಸವ ಕುರಿತು ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ದಕ್ಕೆ ಬರದಂತೆ ಶಾಂತರೀತಿಯಿAದ ಹಬ್ಬವನ್ನು ಆಚರಿಸಬೇಕು. ಪಿಓಪಿ ಗಣೇಶ ಮೂತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂತಿಗಳನ್ನು ಪ್ರತಿಷ್ಠಾಪಿಸಬೇಕು. ಹಬ್ಬದ ಆಚರಣೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ತಿಳಿಸಿದರು. 

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ,  ಪಿಡಬ್ಲುಡಿ, ಪೊಲೀಸ್, ಹೆಸ್ಕಾಂ ಹಾಗೂ ನಗರಸಭೆಯಿಂದ ಪಡೆಯಬಹುದಾದ ಅನುಮತಿಯಲ್ಲಿ ಅಡೆತಡೆಯಾಗದಂತೆ ಏಕಗವಾಕ್ಷಿ ಪದ್ದತಿಯ ವ್ಯವಸ್ಥೆ ಮಾಡಲಾಗಿದೆ. ಅನುಮತಿಗಾಗಿ ಅನಗತ್ಯವಾಗಿ ತಡ ಮಾಡುವಂತಿಲ್ಲ. ವ್ಯವಸ್ಥೆ ನಿಮ್ಮ ಜೊತೆ ಇದ್ದು, ನಾವು ಬದಲಾವಣೆ ಆಗುವ ಅಗತ್ಯವಿದೆ. ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಷ್ಟು ಸಾಧ್ಯವೋ ಅಷ್ಟು ಪಾಲನೆ ಆಗಬೇಕು ಎಂದರು.
ನಗರಸಭೆ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಮೂರು ಹನಮಂತನಗುಡಿ ಕ್ವಾರಿ ಹಳ್ಳ, ಕಾಡಗಿ ಹಳ್ಳ ಹಾಗೂ ಮಾರುದ್ರಪ್ಪನ ಹಳ್ಳ ಸೇರಿ ಒಟ್ಟು ಮೂರು ಸ್ಥಳಗಳಲ್ಲಿ ಗಣೇಶ ವಿಸರ್ಜನೆ ಮಾಡಬಹುದಾಗಿದೆ. ಬಾಗಲಕೋಟೆ ಹಳೆ ನಗರದಲ್ಲಿ ೧೦ ಬಾವಿಗಳನ್ನು ಸ್ವಚ್ಚ ಮಾಡಲಾಗಿದ್ದು, ಆ ಬಾವಿಗಳಲ್ಲಿ ಮೂರ್ತಿ ವಿಜರ್ಸಣೆ ಮಾಡಲು ತಿಳಿಸಿದರು. 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಸರ್ವಜನಿಕರ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಪೆಂಡಾಲ ಹಾಕುವಾಗ ರಸ್ತೆಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಸಂಚಾರಕ್ಕೆ ಅಡಗಡೆಯಾಗದಂತೆ ಪೆಂಡಾಲ ಹಾಕಲು ತಿಳಿಸಿದರ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಗಣೇಶ ಮಂಡಳಿಯಿAದ ವ್ಯಾಲೆಂಟರ್‌ಗಳನ್ನು ಸಹ ನಿಯೋಜಿಸಲು ತಿಳಿಸಿದರು. ನಗರದಲ್ಲಿ ೨೭೦೦ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಪ್ರತಿಷ್ಠಾನೆಗೊಳ್ಳಲಿವೆ ಎಂಬ ಮಾಹಿತಿ ಇದ್ದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರದ ರೀತಿಯಲ್ಲಿ ಹಬ್ಬವನ್ನು ಆಚರಿಸಲು ತಿಳಿಸಿದರು. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದು, ಇವುಗಳ ಮೂಲಕ ಇಲಾಖೆ ಎಲ್ಲವನ್ನು ಗಮನಿಸುತ್ತದೆ ಎಂದರು.
ಮೆರವಣಿಗೆಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಅಳವಡಿಕೆಗೆ ಮಿತಿಯನ್ನು ಹೇರಲಾಗಿದ್ದು, ಒಂದು ಬೇಸ್ ಹಾಗೂ ಒಂದು ಟಾಪ್ ಅಳವಡಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ರಾತ್ರಿ ೧೦ರ ನಂತರ ಡಿಜೆ ಸೌಂಡಗೆ ಅವಕಾಶವಿರುವದಿಲ್ಲ. ಅಷ್ಟರೊಳಗೆ ಗಣೇಶ ವಿಸರ್ಜನೆ ಮಾಡಲು ತಿಳಿಸಿದರು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ವಿದ್ಯುತ್ ಸಂಪರ್ಕವನ್ನು ಹೆಸ್ಕಾಂದಿAದ ಪಡೆದುಕೊಳ್ಳಲು ಸೂಚಿಸಿದರು. 
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಪ್ರಭಾರ ಅಪರ ಜಿಲ್ಲಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಗಣೇಶ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.