ಬದಲಾದ ಅಭ್ಯರ್ಥಿಯ ಚಿಹ್ನೆ:ಮತಗಟ್ಟೆಯೊಂದರಲ್ಲಿ ಮತದಾನ ಸ್ಥಗಿತ

ಕಲಾದಗಿಯ ಮತಗಟ್ಟೆಯೊಂದರಲ್ಲಿ ಮತದಾನ‌ ಸ್ಥಗಿತ.

ಬದಲಾದ ಅಭ್ಯರ್ಥಿಯ ಚಿಹ್ನೆ:ಮತಗಟ್ಟೆಯೊಂದರಲ್ಲಿ ಮತದಾನ ಸ್ಥಗಿತ

ಬಾಗಲಕೋಟೆ:

ಜಿಲ್ಲೆಯ ಕಲಾದಗಿ ಗ್ರಾಮ ಪಂಚಾಯಿತಿ ಮತಗಟ್ಟೆಯೊಂದರಲ್ಲಿ‌ ಅಭ್ಯರ್ಥಿಯ ಚಿಹ್ನೆ ಬದಲಾಗಿದ್ದು, ಅಲ್ಲಿನ ಮತದಾನವನ್ನು ಡಿ.೨೯ಕ್ಕೆ ಮುಂದೂಡಲಾಗಿದೆ.

ಕಲಾದಗಿ ಗ್ರಾಪಂನ ವಾರ್ಡ್ ನಂ.೧೧ರ ಮತಗಟ್ಟೆ ಸಂಖ್ಯೆ ೫೧ರಲ್ಲಿನ‌ ಬ್ಯಾಲೆಟ್ ಪೇಪರ್ ಗಳಲ್ಲಿ ಈ ಎಡವಟ್ಟು ಕಂಡು ಬಂದಿದ್ದು, ಅಲ್ಲಿನ‌ ಮತದಾನ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶಿಸಿದ್ದಾರೆ.

ಭಾನುವಾರ ಬೆಳಗ್ಗೆ ೭.೩೦ಕ್ಕೆ ಮತದಾನ ಸ್ಥಗಿತಗೊಳಿಸಲಾಗಿದ್ದು,ಈ ಮತಗಟ್ಟೆಗೆ ಸೀಮಿತಗೊಳಿಸೊ ಡಿ.೨೯ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಮರುಮತದಾನ ನಡೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.