ರೆಮ್ಡಿಸೀವರ್ ಅಕ್ರಮ ಮಾರಾಟದ ಆರೋಪಿಗಳಿಗೆ ಜಾಮೀನು ನಿರಾಕರಣೆ

ರೆಮ್ಡಿಸೀವರ್ ಅಕ್ರಮ ಮಾರಾಟದ ಆರೋಪಿಗಳಿಗೆ ಜಾಮೀನು ನಿರಾಕರಣೆ

ನಾಡನುಡಿ ನ್ಯೂಸ್
ಬಾಗಲಕೋಟೆ ಮೇ ೨೦: 
ಕೋವಿಡ್ ಸೋಂಕಿತರಿಗೆ ನೀಡಬೇಕಾದ ರೆಮ್ಡಿಸ್ವೀಯರ್ ಲಸಿಕೆಯ ಅಕ್ರಮ ಮಾರಾಟದ ೧೧ ಆರೋಪಿಗಳಿಗೆ ಜಾಮೀನು ನೀಡಲು ಸಿಜೆಎಂ ನ್ಯಾಯಾಲಯ ನಿರಾಕರಿಸಿದೆ. 
 ಆರೋಪಿತರಾದ ತಿಮ್ಮಣ್ಣ ಗಡದಣ್ಣವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ ಲಮಾಣಿ, ಗಣೇಶ ನಾಟಿಕಾರ, ಪ್ರವೀಣ ಕೊಳ್ಳಿ, ಮಹಾಂತೇಶ ಬಿರಾದಾಋ, ವಿಠ್ಠಲ ಛಲವಾದಿ, ರಂಗಪ್ಪ ದಿನ್ನಿ, ರಾಜು ಗುಡಿಮನಿ, ಭೀಮಸೀ ಘಂಟಿ ಅವರು ೧೪ ರೆಮ್ಡಿಸ್ವೀಯರ ಲಸಿಕೆಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರೆಂಬ ಮಾಹಿತಿ ಮೇರೆಗೆ ಸಿ.ಇ.ಎನ್  ಪೊಲೀಸ್ ಠಾಣೆಯ ಮಲ್ಲಯ್ಯ ಮಠಪತಿ ಹಾಗೂ ಸಿಬ್ಬಂದಿ ಔಷಧಿ ಸಹಾಕ ನಿಯಂತ್ರಕ ಆರ್.ಪರಶುರಾಮ ಅವರು ಮೇ ೩ರಂದು ದಾಳಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 
 ಆರೋಪಿತರು ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದು ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಧೀಶ ವಿ.ಪ್ರಕಾಶ ಅವರು ಪ್ರಕರಣ ಗಂಭೀರ ಸ್ವರೂಪದ್ದಾಗಿರುವದರಿಂದ ಜಾಮೀನು ಅರ್ಜಿಯನ್ನು ನಿರಾಕರಿಸಿದರು. ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮಹೇಶ ಪಾಟೀಲ ಅವರು ಜಾಮೀನಿಗೆ ತಕರಾರು ಸಲ್ಲಿಸಿ ಮಾಡಿದ ವಾದವನ್ನು ನ್ಯಾಯಾಧೀಶರು ಎತ್ತಿ ಹಿಡಿದಿದ್ದು ಜಾಮೀನು ನಿರಾಕರಿಸಿರುವದರಿಂದ ಎಲ್ಲ ೧೧ ಆರೋಪಿಗಳಿಗೆ ಇನ್ನಷ್ಟು ದಿನ ಜೈಲುವಾಸ ಅನಿವಾರ್ಯವಾಗಿದೆ.