ಶವವನ್ನೂ ಬಿಡದ ಕಳ್ಳರು: ವಾಮಚಾರಕ್ಕಾಗಿ ಹಣವನ್ನೇ ಹೊತ್ತೊಯ್ದರೆ..? 

* ಲೋಕಾಪುರ ಬಳಿಯ ರೂಗಿ ಗ್ರಾಮದಲ್ಲಿ ನಡೆದಿರುವ ಘಟನೆ  * ಈ ಸುದ್ದಿ ಓದಿದರೆ ನೀವು ಬೆಚ್ಚಿಬಿಳೋದು ಪಕ್ಕಾ 

     ಶವವನ್ನೂ ಬಿಡದ ಕಳ್ಳರು: ವಾಮಚಾರಕ್ಕಾಗಿ ಹಣವನ್ನೇ ಹೊತ್ತೊಯ್ದರೆ..? 

ಶವ ಹೂತಿದ್ದ ಜಾಗೆಯನ್ನು ದುಷ್ಕರ್ಮಿಗಳು ಅಗೆದಿರುವ ಚಿತ್ರ 



ಬಾಗಲಕೋಟೆ ಜು.೨೨: ಹೂತಿದ್ದ ಶವವೊಂದನ್ನು ದುಷ್ಕರ್ಮಿಗಳು ಹೊತ್ತೊಯ್ದಿರುವ ಮುಧೋಳ ತಾಲೂಕಿನ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೂಗಿ ಗ್ರಾಮದಲ್ಲಿ ನಡೆದಿರುವ ವರದಿಯಾಗಿದೆ. 
 ವಾಮಾಚಾರ ಅಥವಾ ನಿಧಿಗಾಗಿ ಈ ದುಷ್ಕೃತ್ಯ ನಡೆದಿದೆ ಎಂದು ಹೇಳಲಾಗಿದ್ದು, ಗ್ರಾಮದಲ್ಲಿ ಆತಂಕ ಮನೆಮಾಡಿದೆ. ಈ ಸಂಬAಧ ದೂರು ದಾಖಲಾಗಿದೆ. ಫೆಬ್ರುವರಿ ೨೧ರ ಶಿವರಾತ್ರಿ ದಿನದಂದು ರೂಗಿ ಗ್ರಾಮದ ರಾಮಣ್ಣ ತುಂಬರಮಟ್ಟಿ ಅಸುನೀಗಿದ್ದು, ಫೆಬ್ರುವರಿ ೨೨ರಂದು ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಸೋಮವಾರ ಭೀಮನ ಅಮವಾಸ್ಯೆ ದಿನದಂದು ದುಷ್ಕರ್ಮಿಗಳು ಹೂತಿದ್ದ ಶವವನ್ನು ಹೊರತೆಗೆದು ಕೊಂಡೊಯ್ದಿದ್ದಾರೆ. ಐದು ತಿಂಗಳ ನಂತರ ಶವ ಅಸ್ತಿ ಪಂಜರವಾಗಿರುವ ಸಾಧ್ಯತೆಯಿದ್ದು, ಯಾವ ಕಾರಣಕ್ಕಾಗಿ ಒಯ್ದಿದ್ದಾರೆಂಬುದು ಅರ್ಥವಾಗುತ್ತಿಲ್ಲ. ವಾಮಾಚಾರ ಅಥವಾ ನಿಧಿ ಕಾರಣಕ್ಕಾಗಿ ಈ ದುಷ್ಕೃತ್ಯ ನಡೆದಿರುವ ಬಗ್ಗೆ ಅನುಮಾನ ಉಂಟಾಗಿದೆ.
 ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.