ಕೋಟೆಯಲ್ಲಿ ಮಲಿಯಾಳಿ ಕುಟ್ಟಿಗಳ ಕಲರವ...ಇದು ನಿಮ್ಮ ಮನತಣಿಸದೆ ಇರಲಾರದು..!

ಕೋಟೆಯಲ್ಲಿ ಮಲಿಯಾಳಿ ಕುಟ್ಟಿಗಳ ಕಲರವ...ಇದು ನಿಮ್ಮ ಮನತಣಿಸದೆ ಇರಲಾರದು..!
ಬಾಗಲಕೋಟೆ
ಕೇರಳದ ಪ್ರಸಿದ್ಧ ಓಣಂ ಹಬ್ಬದ ಸಂಭ್ರಮ ಸೋಮವಾರ ಕೋಟೆನಗರಿಯಲ್ಲಿ ಅನಾವರಣಗೊಂಡಿತು. ಬವಿವ ಸಂಘದ ಮೆಡಿಕಲ್ ಕಾಲೇಜು ಆವರಣದಲ್ಲಿ  ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕೇರಳದ ಉಡುಗೆ, ತೊಡುಗೆ ತೊಟ್ಟು ಸಂಭ್ರಮಿಸಿದರು. ಅಲ್ಲಿನ ವಿಶಿಷ್ಟ ಬಗೆಯ ಖಾದ್ಯಗಳನ್ನು ಸವಿದರು. ಅಲ್ಲಿನ ಸಂಪ್ರದಾಯ, ಆಚರಣೆಗಳನ್ನು ಪರಿಚಯಿಸಿದರು. 

ಓಣಂ ಹಬ್ಬ ವಿಜೃಂಭಣೆಯಿAದ ಆಚರಿಸುವ ಸುಗ್ಗಿ ಹಬ್ಬವಾಗಿದೆ. ೧೦ ದಿನಗಳ ಕಾಲ ನಡೆಯುವ ಈ ಹಬ್ಬದಂದು ಭೂಮಿಯ ಮೇಲಿನ ಜನರನ್ನು ಆಶೀರ್ವದಿಸಲು ಪಾತಾಳಲೋಕದಿಂದ ಬಲಿರಾಜನು ಬರುತ್ತಾನೆ ಎಂಬ ನಂಬಿಕೆಯಿದೆ. ಇಂಥ ವಶಿಷ್ಟö್ಯಪೂರ್ಣ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿAದ ಬವಿವ ಸಂಘದ ಕ್ಯಾಂಪಸ್‌ನಲ್ಲಿ ಆಚರಿಸಲಾಯಿತು. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಬ್ಬದ ಶುಭಾಶಯ ಕೋರಿದರು. 

ಎಚ್‌ಎಸ್‌ಕೆ ಆವರಣದ ಮಲ್ಲಿಕಾರ್ಜುನ ದೇವಸ್ಥಾನದಿಂದ ರಾಜ ಮಹಾಬಲಿಯ ಅದ್ಧೂರಿ ಮೆರವಣಿಗೆ ಜರುಗಿತು. ಅತ್ಯಂತ ಆಕರ್ಷಕವಾಗಿ ತಯಾರಾಗಿದ್ದ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನಸೆಳೆದರು. ಓಣಂ ಸಂಭ್ರಮ ದೃಶ್ಯಕಾವ್ಯವನ್ನೇ ಕಣ್ಣಿಗೆ ಕಟ್ಟಿತು.

ಹಬ್ಬಕ್ಕಿದೆ ಇತಿಹಾಸ: 
   ರಾಜ ಮಹಾಬಲಿ ದಾನಶೂರ, ಕರುಣನಾಗಿದ್ದ ಆತ ಭೂಲೋಕವನ್ನು ಆಡಳುತ್ತಿದ್ದ. ಆತ ಅಸುರನಾದರೂ ತನ್ನ ಪ್ರಜೆಗಳ ಮೇಲೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದ. ಮತ್ತು ದಯೆಯುಳ್ಳವನಾಗಿದ್ದ.  ಬಲಿರಾಜನ ರಾಜ್ಯವು ಬಹಳ ಸಮೃದ್ಧಿಯಿಂದ ಕೂಡಿತ್ತು ಮತ್ತು ಪ್ರಜೆಗಳೆಲ್ಲರೂ ಬಹಳ ಸಂತೋಷದಿAದ ಜೀವನ ನಡೆಸುತ್ತಿದ್ದರು. ಹೀಗೆ ಭೂ ಲೋಕದಲ್ಲಿ ಆಡಳಿತ ನಡೆಸುತ್ತಿದ್ದ ಮಹಾಬಲಿಯು ತನ್ನ ಪರಾಕ್ರಮದಿಂದ ಮೂರು ಲೋಕವನ್ನು ವಶಪಡಿಸಿಕೊಂಡಾಗ, ಇಂದ್ರನು ದೇವಲೋಕದ ನಿಯಂತ್ರಣವವನ್ನು ಮರಳಿ ಪಡೆಯಲು ವಿಷ್ಣು ದೇವರ ಸಹಾಯವನ್ನು ಕೋರಿದ. ಮಹಾಬಲಿ ವಿಷ್ಣುವಿನ ಮಹಾನ್ ಭಕ್ತನಾಗಿದ್ದ ಕಾರಣ ವಿಷ್ಣುವಿಗೆ ಇವರ ನಡುವೆ ಪಕ್ಷಪಾತ ಮಾಡಲು ಕಷ್ಟವಾಯಿತು. ಆದರೂ ದೇವಲೋಕವನ್ನು ಇಂದ್ರನಿಗೆ ಮರಳಿಸುವ ಸಲುವಾಗಿ ವಿಷ್ಣು ಕುಬ್ಜ ವಾಮನನ ಅವತಾರವನ್ನು ತಾಳಿ, ಮಹಾಬಲಿಯನ್ನು ಭೇಟಿಯಾಗಿ ಮೂರು ಹೆಜ್ಜೆ ಗಾತ್ರದ ಜಮೀನಿನ ಮಾಲಿಕತ್ವದ ಹಕ್ಕನ್ನು ಕೇಳಿದ. ರಾಜನು ಇದಕ್ಕೆ ಒಪ್ಪಿಗೆ ನೀಡಿದನು. ಈ ಸಂದರ್ಭದಲ್ಲಿ ವಾಮನ ಅವತಾರದಲ್ಲಿದ್ದ ವಿಷ್ಣುವಿನ ಗಾತ್ರ ಹಿಗ್ಗುತ್ತಾ ಹೋಯಿತು. ಮತ್ತು ಬಲಿ ರಾಜ ವಶಪಡಿಸಿಕೊಂಡ ಸಂಪೂರ್ಣ ಪ್ರದೇಶವನ್ನು ಎರಡು ಹೆಜ್ಜೆಗಳನ್ನಿಡುವ ಮೂಲಕ ಆವರಿಸಿಕೊಂಡ. ಮೂರನೇ ಹೆಜ್ಜೆಯನ್ನು ಎಲ್ಲಿ ಇಡುವುದೆಂದು ನೋಡಿದಾಗ, ಉದಾತ್ತನಾಗಿದ್ದ ಮಹಾಬಲಿಯು ಮೂರನೇ ಹಜ್ಜೆಯನ್ನು ತನ್ನ ತಲೆಯ ಮೇಲಿಡಲು ಹೇಳಿದ. ಹೀಗೆ ವಾಮನ ರೂಪದಲ್ಲಿದ್ದ ವಿಷ್ಣುವು ಮಹಾಬಲಿಯ ತಲೆ ಮೇಲೆ ಕಾಲನ್ನಿಟ್ಟಾಗ ಆತ ಪಾತಳ ಲೋಕಕ್ಕೆ ಹೋಗುತ್ತಾನೆ. ಮತ್ತು ಈತನ ನಿಷ್ಠೆಗೆ ಮೆಚ್ಚಿದ ವಿಷ್ಣು ಮಹಾಬಲಿಗೆ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿಯಾಗುವ ವರವನ್ನು ನೀಡುತ್ತಾನೆ. ಬಲಿರಾಜ ಭೂಮಿಗೆ ಬರುವ ಸುದಿನವನ್ನು ಕೇರಳದಲ್ಲಿ ಓಣಂ ಹಬ್ಬವೆಂದು ಆಚರಿಸಲಾಗುತ್ತದೆ.
ಸಂಘದ ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ನರ್ಸಿಂಗ್ ಕಾಲೇಜ್ ಪ್ರಾಚಾರ್ಯರಾದ ಡಾ.ದಿಲೀಪ್ ನಾಟೆಕರ್, ಡಾ.ಜಯಶ್ರೀ ಈಟ್ಟಿ, ಡಾ.ಪ್ರವೀಣ ಪಾಟೀಲ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಇತರರು ಇದ್ದರು.