ಬಾಗಲಕೋಟೆಯ ಸಚಿನ್ ಪುರೋಹಿತಗೆ ಅದೃಷ್ಟ ತಂದುಕೊಡುವುದೇ 'ಸಿಂಧೂರ'
ಸಚಿನ್ ಪುರೋಹಿತ ಬಣ್ಣ ಹಚ್ಚಿರುವ ಸಿಂಧೂರ ಚಿತ್ರ ವೀಕ್ಷಕರ ಮನ್ನಣೆ ಪಡೆಯಲು ಅಣಿಯಾಗಿ ನಿಂತಿದೆ. ಸಾಕಷ್ಟು ಶ್ರಮವಹಿಸಿ ಬಾಗಲಕೋಟೆ ಪ್ರತಿಭೆ ನಿರ್ಮಿಸಿರುವ ಈ ಚಿತ್ರ ಅ.೧೪ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಬಾಗಲಕೋಟೆ:
ನಗರದ ಉದಯೋನ್ಮುಖ ಪ್ರತಿಭೆ ಸಚಿನ್ ಪುರೋಹಿತ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಸಿಂಧೂರ ಚಿತ್ರ ಅ.೧೪ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಬಾಗಲಕೋಟೆಯ ವಾಸವಿ ಮಂದಿರದಲ್ಲಿ ಒಂದು ವಾರಗಳ ಕಾಲ ಚಿತ್ರ ಉಚಿತ ಪ್ರದರ್ಶನ ಕಾಣಲಿದ್ದು, ಜನ ಚಿತ್ರಮಂದಿರಗಳಿಗೆ ಆಗಮಿಸಿ ವೀಕ್ಷಸಬೇಕೆಂದು ನಟ ಸಚಿನ್ ಪುರೋಹಿತ ಹಾಗೂ ಚಿತ್ರತಂಡ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿನ್ ತಮ್ಮ ತಂದೆ ದಿವಂಗತ ರಾಮ ಪುರೋಹಿತ ಅವರು ೨೫ ಚಿತ್ರಗಳಲ್ಲಿ ನಟಿಸಿದ್ದರು. ಸಿಂಧೂರ ಚಿತ್ರಕ್ಕೆ ಅವರೇ ಕಥೆ ಬರೆದಿದ್ದರು. ನನ್ನನ್ನು ನಾಯಕ ನಟನಾಗಿ ಕಾಣಬೇಕೆಂಬ ಅವರ ಆಸೆ ಈ ಈಡೇರಿದೆ ಎಂದರು.
ಚಿತ್ರರಂಗ ಬೆಂಗಳೂರು ಕೇಂದ್ರಿತವಾದರೂ ನನ್ನೂರಿನಿಂದಲೇ ಬಿಡುಗಡೆಗೊಳ್ಳಬೇಕೆಂಬುದು ನನ್ನ ಆಶಯ. ಇಲ್ಲಿನ ಜನ ತಮ್ಮ ಮನೆ ಮಗನ ಕೈ ಹಿಡಿಲಿದ್ದಾರೆ ಎಂವ ಭರವಸೆ ಇದೆ ಎಂದರು.
ಅಂತರ ಧರ್ಮೀಯ ಪ್ರೀತಿ, ಇಬ್ಬರು ನಾಯಕ ನಟಿಯರು ನಾಯಕ ಯಾರ ಹಣೆಗೆ ಸಿಂಧೂರ ಇಡುತಾನೆ ಎಂಬುದೇ ಚಿತ್ರದ ಕಥೆಯಾಗಿದೆ. ಕುಟುಂಬ ಸಮೇತರಾಗಿ ಎಲ್ಲರೂ ನೋಡಬಹುದಾದ ಚಿತ್ರ ಇದಾಗಿದ್ದು, ಯುವ ತಂಡವನ್ನು ಎಲ್ಲರೂ ಆಶೀರ್ವದಿಸಬೇಕೆಂದು ಕೋರಿದರು.
ನಾಯಕಿನಟಿ ನಿರೀಕ್ಷಾ ನಾಯ್ಡು ಮಾತನಾಡಿ, ಯುವ ಪ್ರತಿಭೆಗಳು ಸೇರಿ ಮಾಡಿರುವ ಈ ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಆಗಮಿಸಿ ವೀಕ್ಷಿಸಿ ಆಶೀರ್ವದಿಸಬೇಕೆಂದರು.
ಇನ್ನೊರ್ವ ನಾಯಕಿನಟಿ ಸುರಕ್ಷಿತ ಶೆಟ್ಟ, ನೃತ್ಯ ನಿರ್ದೇಶಕ ಜಿ.ಪಿ.ಆರಾಧ್ಯ, ಸಂಕಲಕನಕಾರ ಜಿ.ಪಿ.ಅರವಿಂದ ಉಪಸ್ಥಿತರಿದ್ದರು.