ದಡ್ಡೇನ್ನವರ ಸರ್ಕಲ್ನಲ್ಲಿ ಲಾರಿ ಢಿಕ್ಕಿ: ಯೂನಿಯನ್ ಬ್ಯಾಂಕ್ ಮಹಿಳಾ ಉದ್ಯೋಗಿ ಸಾವು..!
ಬಾಗಲಕೋಟೆ:ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿಯಾಗಿ ಯೂನಿಯನ್ ಬ್ಯಾಂಕಿನ ಮಹಿಳಾ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ನಗರದ ರೋಟರಿ ಸರ್ಕಲ್ ನಲ್ಲಿ ಸಂಭವಿಸಿದೆ.
ವಿಜಯಪುರ ಮೂಲದ ಬಾಗಲಕೋಟೆ ನವನಗರದ ನಿವಾಸಿ ಭಾಗೀರಥಿ ಕುಬೇರಪ್ಪ ಕುಂಬಾರ(೩೫) ಮೃತ ದುರ್ದೈವಿ.
ನಗರದ ಯೂನಿಯನ್ ಬ್ಯಾಂಕ್ ಉದ್ಯೋಗಿಯಾಗಿರುವ ಭಾಗಿರಥಿ ಅವರು ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹೊರಟಾಗ ಲಾರಿ ಢಿಕ್ಕಿ ಹೊಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯ ಮತ್ತು ವೇಗದಲ್ಲಿ ಚಲಾಯಿಸಿದ್ದರಿಂದಾಗಿ ಘಟನೆ ಸಂಭವಿಸಿದೆ ಎಂದು ದೂರಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಎಸ್.ಎಂ.ಅವಜಿ, ಸಂಚಾರ ವಿಭಾಗದ ಪಿಎಸ್ಐ ಪ್ರಕಾಶ ಬಣಕಾರ ಘಟನಾ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಲಾರಿ ಚಾಲಕ ಪರಾರಿಯಾಗಿದ್ದಾನೆ.