ಡಿಸಿಸಿ ಗದ್ದುಗೆ: ಫಲಿತಾಂಶಕ್ಕಾಗಿ ಕಾಯಬೇಕು ಇನ್ನೊಂದು ವಾರ

ಡಿಸಿಸಿ ಬ್ಯಾಂಕ್ ಫಲಿತಾಂಶ ವಿಚಾರ ನ.೨೫ ರಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ

ಡಿಸಿಸಿ ಗದ್ದುಗೆ: ಫಲಿತಾಂಶಕ್ಕಾಗಿ ಕಾಯಬೇಕು ಇನ್ನೊಂದು ವಾರ

ನಾಡನುಡಿ ವಿಶೇಷ
ಬಾಗಲಕೋಟೆ:
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ‌ ಮಂಗಳವಾರ ಚುನಾವಣೆ ನಡೆದಿದ್ದರೂ ಫಲಿತಾಂಶಕ್ಕಾಗಿ ಇನ್ನೊಂದು ವಾರ ಕಾಯಬೇಕಿದೆ.

ಷೇರು ಇಲ್ಲದಿದ್ದರೂ ಸರ್ಕಾರ ಸಿದ್ಧನಗೌಡ ಪಾಟೀಲ ಅವರನ್ನು ನಾಮನಿರ್ದೇಶನಗೊಳಿಸಿರುವುದನ್ನು ಪ್ರಶ್ನಸಿ ಕೆಲವರು ನ್ಯಾಯಾಲಯಕ್ಕೆ ತೆರಳಿರುವುದರಿಂದ ಮತದಾನ ನಡೆಸಿದರೂ ಫಲಿತಾಂಶ ಪ್ರಕಟಿಸದಂತೆ ಧಾರವಾಡ ಹೈಕೋರ್ಟ್ ಸೂಚಿಸಿತ್ತು.

ಬುಧವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ನ.೨೫ಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.