ಲೋಕಸಭೆ ಚುನಾವಣೆ : ಮನೆಯಲ್ಲಿ ಸಿಕ್ಕೆಬಿಡ್ತು ಭಾರಿ ಪ್ರಮಾಣದಲ್ಲಿ ಮದ್ಯ
ಬಾಗಲಕೋಟೆ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಮಧಭಾವಿ ಗ್ರಾಮದ ಮನಯೊಂದರಲ್ಲಿ ಅಕ್ರಮವಾಗಿ ಬಚ್ಚಿಟ್ಟ ೧.೫೦ ಲಕ್ಷ ರೂ.ಗಳ ಮೌಲ್ಯದ ೩೪೫ ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಶನಿವಾರ ಮದಭಾವಿ ಗ್ರಾಮದ ಆರೋಪಿತ ಅರುಣ ಮಲ್ಲಪ್ಪ ಕಲ್ಲೋಳ್ಳಿ ಅವರ ಮನೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ೧.೫೦ ಲಕ್ಷ ರೂ.ಗಳ ಮೌಲ್ಯದ ೯೦ ಮಿಲೀಯ ೪೦ ಬಾಕ್ಸ್ಗಳಲ್ಲಿ ೩೪೫ ಲೀಟರ್ ಓರಿಜಿನಲ್ ಚಾಯ್ಸ್ ವಿಸ್ಕಿಯನ್ನು ಅಬಕಾರಿ ಇಲಾಖೆ ತಂಡ ಪತ್ತೆ ಹಚ್ಚಿ ಸದರಿ ಮದ್ಯವನ್ನು ಜಪ್ತ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಪ್ರಾರಂಭವಾದ ದಿನದಿಂದ ಇಲ್ಲಿವರೆಗೆ ಒಟ್ಟು ೩೭ ಅಬಕಾರಿ ಪ್ರಕರಣಗಳನ್ನು ದಾಖಲಿಸಿ ೩೫ ಜನ ಆರೋಪಿಗಳನ್ನು ಬಂಧಿಸಿ ಕ್ರಮಜರುಗಿಸಲಾಗುತ್ತಿದೆ. ಸದರಿ ಪ್ರಕರಣದಲ್ಲಿ ೬೦೫ ಲೀಟರ ಮದ್ಯ, ೬೭ ಲೀಟರ್ ಗೋವಾ ರಾಜ್ಯದ ಮದ್ಯ, ೯೬ ಲೀಟರ್ ಬೀಯರ್, ೧೦ ಲೀಟರ್ ಕಳ್ಳಬಟ್ಟಿ ಸಾರಾಯಿ, ೯ ದ್ವಿಚಕ್ರವಾಹನ, ಒಂದು ಆಟೋ, ೩ ಕಾರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳಿಂದ ಅಂದಾಜು ಒಟ್ಟು ೩೫ ಲಕ್ಷ ರೂ.ಗಳ ಮೌಲ್ಯವಾಗಿರುತ್ತದೆ.
ಚುನಾವಣಾ ಅಕ್ರಮಗಳು ಜಿಲ್ಲೆಯ ಯಾವುದೇ ಸ್ಥಳದಲ್ಲಿ ಕಂಡುಬAದಲ್ಲಿ ಆಯಾ ಕಾರ್ಯವ್ಯಾಪ್ತಿಯ ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಅಬಕಾರಿ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿ ನೀಡುವ ವ್ಯಕ್ತಿಗಳ ವಿವರಗಳನ್ನು ಗೌಪ್ಯವಾಗಿ ಇಡುವದಲ್ಲದೆ ಸರ್ಕಾರದಿಂದ ದೊರೆಯುವಂತ ರಹಸ್ಯ ಸೇವಾನಿಧಿಯನ್ನು ಸಹ ಗೌಪ್ಯತೆಯ ಮೂಲಕ ಪಾವತಿಸಲಾಗುತ್ತದೆ ಎಂದು ತಿಳಿಸಿದ್ದಾರೆ.