ಸ್ವಂತಕ್ಕಿಲ್ಲ ಕಾರು, ಪತಿ ಬಳಿಯೇ ಸಾಲ... ೪೭ ಎಕರೆ ಭೂಮಿ ಒಡತಿ ಸಂಯುಕ್ತಾ..!
ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ೪೭.೧೫ ಎಕರೆ ಕೃಷಿ ಭೂಮಿಯ ಒಡತಿಯಾಗಿದ್ದು, ೯೩.೬೬ ಲಕ್ಷ ರೂ.ಗಳ ಚರಾಸ್ತಿ ಹಾಗೂ ೧.೯೯ ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
ಸಂಯುಕ್ತ ಅವರ ಕೈಯಲ್ಲಿ ೨.೩೯ ಲಕ್ಷ ರೂ. ನಗದು ಇದ್ದು, ಪತಿ ಶಿವಕುಮಾರ ತಲಂಪಲ್ಲಿ ಅವರ ಕೈಯಲ್ಲಿ ೧.೭೨ ಲಕ್ಷ ರೂ. ನಗದು ಇದೆ. ಇಬ್ಬರು ವಿವಿ ಬ್ಯಾಂಕ್‌ಗಳಲ್ಲಿ ನಗದು ಇರಿಸಿದ್ದು, ಪತಿ ಶಿವಕುಮಾರ್ ಅವರು ತಮ್ಮದೇ ಕುಟುಂಬ ತಲಂಪಲ್ಲಿ ಇನ್ಫಾç ಪ್ರೆöÊ.ಲಿ ನಲ್ಲಿ ಶೇರ್‌ಗಳನ್ನು ಹೊಂದಿದ್ದಾರೆ. ಪತ್ನಿ ಸಂಯುಕ್ತಾ ಪಾಟೀಲ ಅವರಿಗೆ ೩.೦೯ ಲಕ್ಷ ರೂ. ಸೇರಿ ಹಲವರಿಗೆ ಅವರು ಸಾಲವನ್ನೂ ನೀಡಿದ್ದಾರೆ.
ಸಂಯುಕ್ತಾ ಪಾಟೀಲ ಅವರು ೩೦ ಲಕ್ಷ ರೂ. ಬೆಲೆ ಬಾಳುವ ಅರ್ಧ ಕೆಜಿ ಚಿನ್ನವನ್ನು ಹೊಂದಿದ್ದು, ಪತಿ ಶಿವಕುಮಾರ ಅವರು ೨೩.೯೭ ಲಕ್ಷ ರೂ. ಬೆಲೆ ಬಾಳುವ ೫೧೦ ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಸಂಯುಕ್ತಾ ಅವರ ಬಳಿ ೫ ಕೆಜಿ ಬೆಳ್ಳಿಯೂ ಇದೆ. ಸಂಯುಕ್ತಾ ಬಳಿ ಒಟ್ಟು ೯೩.೬೬ ಲಕ್ಷ ರೂ. ಚರಾಸ್ತಿ, ಶಿವಕುಮಾರ ಬಳಿ ೧.೦೪ ಕೋಟಿ ರೂ.ಗಳ ಚರಾಸ್ತಿ ಇದೆ.
ಸಂಯುಕ್ತಾ ಪಾಟೀಲ ಅವರು ಭೂತನಾಳ, ಮದಗುಣಕಿ, ಶೇಗುಣಶಿ, ಮಹಲ್‌ಬಾಗ್ಯಾತ ಊರುಗಳನ್ನು ಸೇರಿ ಒಟ್ಟು ೪೭.೧೫ ಎಕರೆ ಭೂಮಿಯನ್ನು ಹೊಂದಿದ್ದಾರೆ. ಪತಿ ಶಿವಕುಮಾರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. ಪತಿ ಹಾಗೂ ಪತ್ನಿ ಹೆಸರಿನಲ್ಲಿ ಯಾವುದೇ ವಾಹನಗಳು ಇಲ್ಲ. ಸಂಯುಕ್ತಾ ಅವರು ಒಟ್ಟು ೧.೯೯ ಕೋಟಿ ರೂ.ಗಳ ಸ್ಥಿರಾಸ್ತಿಯನ್ನು ಹೊಂದಿದ್ದು, ೩.೦೯ ಲಕ್ಷ ರೂ.ಗಳ ಸಾಲವನ್ನು ಹೊಂದಿದ್ದಾರೆ. ಅವರ ಪತಿ ಶಿವಕುಮಾರ ಅವರು ತಮ್ಮ ತಂದೆ ಶಿವಾನಂದ ಪಾಟೀಲರ ಬಳಿ ೭ ಲಕ್ಷ ರೂ. ಸಾಲ ಹಾಗೂ ಕೆನರಾ ಬ್ಯಾಂಕ್‌ನಲ್ಲಿ ೮.೯೫ ಲಕ್ಷ ರೂ.ಗಳ ಶೈಕ್ಷಣಿಕ ಸಾಲವೂ ಸೇರಿದಂತೆ ಒಟ್ಟು ೫೯.೯೫ ಲಕ್ಷ ರೂ.ಗಳ ಸಾಲವನ್ನು ಹೊಂದಿದ್ದಾರೆ.