ಅಗ್ರಿ ಸ್ಟಾರ್ಟ್ಅಪ್ ನಲ್ಲಿ ಗಮನಸೆಳೆಯುತ್ತಿದೆ ಚಂದನಗೌಡರ ಈ‌ ಐಡಿಯಾ..!

ಹೊಸ ವಿವೇಚನೆಯೊಂದಿಗೆ ಆರಂಭಗೊಳ್ಳುವ ನವೋದ್ಯಮಗಳು ಜನರ ಗಮನಸೆಳೆಯುತ್ತವೆ. ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಗ್ರಿ ಸ್ಟಾರ್ಟಪ್ ಸಮ್ಮೇಳನದಲ್ಲಿ ಚಂದನಗೌಡ ಅವರ ಈ ಐಡಿಯಾ ಸಖತ್‌ ಸದ್ದು ಮಾಡುತ್ತಿದೆ.

ಅಗ್ರಿ ಸ್ಟಾರ್ಟ್ಅಪ್ ನಲ್ಲಿ ಗಮನಸೆಳೆಯುತ್ತಿದೆ ಚಂದನಗೌಡರ ಈ‌ ಐಡಿಯಾ..!

ಬಾಗಲಕೋಟೆ:
ಕಾಡಿನ ಅಪರೂಪದ ಕಲ್ಲುಗಳು, ಪಾಚಿಗಟ್ಟಿ ಬೆಳೆಯುವ ಗಿಡಗಳು.. ಮರಗಳ ಮಧ್ಯರ ಜಿನುಗುವ ಮಳೆ ಹನಿ.. ಕಲ್ಲಿನ ಮಧ್ಯೆಯಿಂದ ಹರಿಯುವ ನೀರಿನ ಜುಳು..ಜುಳು ಸದ್ದು ಯಾರಿಗೆ ತಾನೆ‌‌ ಇಷ್ಟವಿಲ್ಲ ಹೇಳಿ..?

ಅಂಥ ಸೊಬಗನ್ನು ನೀವೀಗ ಮನೆಯಲ್ಲೇ ಅನಾವರಣಗೊಳಿಸಬಹುದು. ಇದನ್ನು ಸಾಧ್ಯವಾಗಿಸಿದವರು ದಿ ಟರ‌್ಯಾಕೋ ಸ್ಟಾರ್ಟ್ ಅಪ್ ಆರಂಭಿಸಿರುವ ಚಂದನಗೌಡ. ಅವರು ಸಿದ್ಧಪಡಿಸಿರುವ ಲ್ಯಾಂಡಸ್ಕೇಪ್ ಪ್ರಾತ್ಯಕ್ಷಿಕೆಗಳು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡಿರುವ ಅಖಿಲ ಭಾರತ ಅಗ್ರಿ ಸ್ಟಾರ್ಟ್ಅಪ್ ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ಲಭ್ಯವಿದೆ.

ಸಾಮಾನ್ಯವಾಗಿ ಸಿದ್ಧಗೊಳ್ಳುವ ಅಕ್ವೇರಿಯಿಂನಲ್ಲಿ ಮೀನುಗಳಿಗೆ ಅಗತ್ಯವಾಗುಷ್ಟು ಆಕ್ಸಿಜನ್ ಲಭಿಸುವುದಿಲ್ಲ. ಹೀಗಾಗಿ ಅವುಗಳ ಸಾಯೋದು ಹೆಚ್ಚು ಆದರೆ ನಾವು ಕೃತಕವಾಗಿ ಯಾವುದೇ ವಸ್ತು ಸಿದ್ಧಪಡಿಸದೆ ಕಾಡಿನ ವಸ್ತುಗಳನ್ನು ಬಳಸಿಯೇ ರೇನ್ ಫಾರೆಸ್ಟ್ ಮಾದರಿಯ ಅಕ್ವೇರಿಯಂ ಸಿದ್ಧಪಡಿಸಿದ್ದೇವೆ ಎಂದು ಚಂದನಗೌಡ ತಿಳಿಸಿದರು.

ನಮ್ಮ ಅಕ್ವೇರಿಯಂ ಮಾದರಿಗಳು ಪರಿಸರ ಸ್ನೇಹಿಯಾಗಿವೆ.‌ಗ್ರಾಹಕರ ಬೇಡಿಕೆಯ ಅಳತೆಯಲ್ಲಿ ಮಾಡಿಕೊಡುತ್ತೇವೆ. ಅಪರೂಪದ ಗಿಡ, ಬಳ್ಳಿ, ಕಲ್ಲುಗಳನ್ನು ಬಳಸಿ ಸಿದ್ಧಪಡಿಸಲಾಗುತ್ತದೆ. ಅದು ಮನೆಯ ಅಂದವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.

ನಮ್ಮ ಅಕ್ವೇರಿಯಂಗಳು ನಟ ಕಿಚ್ಚ ಸುದೀಪ, ಯಶ್ ಅವರ ಮನೆಗಳಲ್ಲೂ ಇವೆ. ಶೂನ್ಯ ಬಂಡವಾಳದೊಂದಿಗೆ ಆರಂಭಗೊಂಡ ನಮ್ಮ ಕಂಪನಿ ಇಂದು ವಾರ್ಷಿಕ ೪೫ ಲಕ್ಷ ರೂ.ಗಳ ವಹಿವಾಟು ನಡೆಸುತ್ತಿದೆ ಎಂದು ವಿವರಿಸಿದರು.