Loose Talk: ನಾಲಿಗೆ ಹರಿಬಿಟ್ಟ ಯತ್ನಾಳ ವಿರುದ್ಧ ಬಿತ್ತು ಕೇಸ್..!

Loose Talk: ನಾಲಿಗೆ ಹರಿಬಿಟ್ಟ ಯತ್ನಾಳ ವಿರುದ್ಧ ಬಿತ್ತು ಕೇಸ್..!
ಬಾಗಲಕೋಟೆ: ಮುಧೋಳದಲ್ಲಿ ಗುರುವಾರ ಸಂಜೆ ನಡೆದ ಜನತಾಪ್ಲಾಟಿನ ಜನತಾ ರಾಜಾ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯತ್ನಾಳ ಅವರು ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ ಕುರಿತಾಗಿ ಟೀಕಿಸುವ ಭರದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿದ್ದರು. ಎಷ್ಟೇ ಪ್ರಕರಣ ದಾಖಲಿಸಿದರೂ ನಾನು ಹೆದರುವುದಿಲ್ಲ ಈಗಾಗಲೇ ನನ್ನ ಮೇಲೆ ೩೬-೩೭ ಪ್ರಕರಣಗಳು ದಾಖಲಾಗಿವೆ ಎಂದು ಗುಡುಗಿದ್ದರು. ಮೆರವಣಿಗೆಯಲ್ಲಿ ತೆಲಂಗಾಣದ ಹೈದರಾಬಾದಿನ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ ಕೂಡ ಭಾಗವಹಿಸಬೇಕಿತ್ತು. ಆದರೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಪರಿಣಾಮ ಅವರು ಆಗಮಿಸಿರಲಿಲ್ಲ. ಈ ವಿಚಾರವಾಗಿಯೂ ಯತ್ನಾಳ ಗುಡುಗಿದ್ದರು.  ಮತ್ತೊಂದೆಡೆ ಯತ್ನಾಳ ಹೇಳಿಕೆ ಖಂಡಿಸಿ ಮುಧೋಳದಲ್ಲಿ ಶುಕ್ರವಾರ ಮುಸ್ಲಿಂರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. 
ಈ ಎಲ್ಲ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ವೈ.ಅಮರನಾಥ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.