ತಾಲಿಬಾನ್ ಐ ಲವ್ ಎಂದವನೀಗ ಕಂಬಿ ಹಿಂದೆ..!
ಫೇಸ್ಬುಕ್ ನಲ್ಲಿ ತಾಲಿಬಾನ್ ಪರ ಪೋಸ್ಟ್ ಮಾಡಿ ತಲೆಮರೆಸಿಕೊಂಡಿದ್ದ ಜಮಖಂಡಿ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ತಾಲಿಬಾನ್ ಪರ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಜಮಖಂಡಿ ಮೂಲದ ಆಸಿಫ್ ಗಲಗಲಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅಫ್ಗಾನಿಸ್ತಾನದ ವಿಡಿಯೋ ಒಂದರಲ್ಲಿ " ಐ ಲವ್ ತಾಲಿಬಾನ್" ಎಂದು ಬರೆದುಕೊಂಡಿದ್ದ. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಈತನ ಹುಡಕಾಟದಲ್ಲಿದ್ದ ಪೊಲೀಸರು ಸಂಜೆ ಈತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತನ ಮೇಲೆ 295(ಎ),505(2)ಮತೀಯ ಗಲಭೆ ಮತ್ತು ಪ್ರಚಾರದ ಪ್ರಕರಣ ದಾಖಲಾಗಿದೆ.
ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ, ಆತನ ತೀವ್ರ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.