ಶೂಟೌಟ್ ಮಾಡಿಕೊಂಡು ನಿವೃತ್ತ ನ್ಯಾಯಾಧೀಶ ಮಾನಪ್ಪ  ತಳವಾರ ಆತ್ಮಹತ್ಯೆ 

ಶೂಟೌಟ್ ಮಾಡಿಕೊಂಡು ನಿವೃತ್ತ ನ್ಯಾಯಾಧೀಶ ಮಾನಪ್ಪ  ತಳವಾರ ಆತ್ಮಹತ್ಯೆ 

ಬಾಗಲಕೋಟೆ
ನವನಗರದ ಸೆಕ್ಟರ್ ನಂ.೧೬ರಲ್ಲಿ ವಾಸವಾಗಿದ್ದ ನಿವೃತ್ತ ನ್ಯಾಯಧೀಶ ಮಾನಪ್ಪ ತಳವಾರ(೫೩) ಶುಕ್ರವಾರ ಸಂಜೆ ಗುಂಡು‌ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಶೆಲ್ಲಿಕೇರಿ ಮೂಲದ ಮಾನಪ್ಪ ನವನಗರದ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಇತ್ತೀಚೆಗಷ್ಟೇ ಬಿದ್ದು ಕಾಲ ಮುರಿದುಕೊಂಡಿದ್ದ ಮಾನಪ್ಪ ಇನ್ನೊಬ್ಬರನ್ನು ಆಶ್ರಯಿಸುವ ಅನಿವಾರ್ಯತೆಯಲ್ಲಿದ್ದರು, ಇದು ಅವರ ಮನಸ್ಸಿಗೆ ತೀವ್ರ ಘಾಸಿ ಮಾಡಿತ್ತು ಎಂದು ಹೇಳಲಾಗಿದೆ.

ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ್ಯಾಯಾಧೀಶರಾಗಿದ್ದ ಅವರು ತಮ್ಮ ಬಳಿಯಿದ್ದ ಲೈಸನ್ಸ್ಡ್ ಬಂದೂಕಿನಿಂದ ಶುಕ್ರವಾರ ರಾತ್ರಿ ಎರಡು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐಗಳಾದ ಎಸ್.ಎಂ.ಅವಜಿ, ವಿಜಯಕುಮಾರ ಮುರಗುಂಡಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.