ಕರ್ನಾಟಕ ಬಂದ್ ಗೆ ಕರವೇ ಶಿವರಾಮೇಗೌಡ ಬಣ ಬೆಂಬಲ

ಜಿಲ್ಲಾ ಬಂದ್ ಗೆ ಕರೆ ನೀಡಿರುವ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು. ಡಿ.೫ರಂದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಬಂದ್ ಗೆ ಕರವೇ ಶಿವರಾಮೇಗೌಡ ಬಣ ಬೆಂಬಲ

ನಾಡನುಡಿ ನ್ಯೂಸ್
ಬಾಗಲಕೋಟೆ:
ಮರಾಠ ಸಮುದಾಯ ಅಭಿವೃದ್ಧಿ ನಿಗಮ ವಿರೋಧಿಸಿ ವಿವಿಧ ಕನ್ನಡಪರ‌ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಘಟಕ ಬೆಂಬಲ ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ಕನ್ನಡಿಗರು- ಮರಾಠಿಗರನ್ನು ಒಡೆಯುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ಪ್ರತಿಭಟಿಸಲಾಗುತ್ತಿದೆ. ಬಂದ್ ಗೆ ಜನ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕನ್ನಡಪರ ಹೋರಾಟಗಾರರ ಬಗ್ಗೆ ಕೆಲವರು ಲಘು ಹೇಳಿಕೆಗಳನ್ನು ನೀಡುತ್ತಿದ್ದು, ಕಾಳಿ ಸ್ವಾಮೀಜಿ ಮಠಾಧೀಶರಾಗಿ ಅದರಂತೆ ನಡೆದುಕೊಳ್ಳಬೇಕು.‌ಕನ್ನಡ ಸಂಘಟನೆಗಳನ್ನು ಕೆಣಕಿದರೆ ಸಹಿಸಲು ಸಾಧ್ಯವಿಲ್ಲ ಎಂದರು.

ಎಂಇಎಸ್ ಪುಂಡರಿಗೆ ಈ‌ ನಿಗಮದ ಅನುಕೂಲವಾಗುತ್ತದೆ. ನಾವು ಮರಾಠರನ್ನು ಅವಹೇಳನ ಮಾಡುತ್ತಿಲ್ಲ. ನಮ್ಮ ವಿರೋಧವಿರುವುದು ಕನ್ನಡದ ವಿರೋಧಿಗಳಿಗೆ ಮಾತ್ರ ಎಂದರು.