ಬಾಗಲಕೋಟೆ ಬಿಜೆಪಿ ಐಟಿ ಸೆಲ್ ಪದಾಧಿಕಾರಿಗಳ ಆಯ್ಕೆ
ನೂತನ ಐಟಿ ಸೆಲ್ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಆಗಿದ್ದು, ಆದರ್ಶ ರೂಗಿಮಠ ಜಿಲ್ಲಾ ಸಂಚಾಲಕರಾಗಿದ್ದಾರೆ
ನಾಡನುಡಿ ವರದಿ
ಬಾಗಲಕೋಟೆ ಅ.15:
ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಂಚಾಲಕರಾಗಿ ಜಮಖಂಡಿಯ ಆದರ್ಶ ರೂಗಿಮಠ ಆಯ್ಕೆ ಆಗಿದ್ದಾರೆ.
ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ಅವರು ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದ್ದು, ಬಾಗಲಕೋಟೆಯ ಪಂಕಜ ನಿಕ್ಕಂ ಹಾಗೂ ಮುಧೋಳದ ಸಚಿನ ಅರಳಿಕಟ್ಟಿ ಸಹ ಸಂಚಾಲಕರಾಗಿ ಆಯ್ಕೆ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿರುವ ನಮೋ ಸುನಿಲ ಅವರು ಕಾರ್ಯಕಾರಣಿ ಸದಸ್ಯರಾಗಿದ್ದು, ಒಟ್ಟು ೧೦ ಜನರ ತಂಡವನ್ನು ಆಯ್ಕೆ ಮಾಡಲಾಗಿದೆ.
Nadanudi-ನಾಡನುಡಿ ಪೇಜ್ ಲೈಕ್ ಮಾಡಿ.ಪೋಸ್ಟ್ ಶೇರ್ ಮಾಡಿ.