ಐವರ ಸಾವಿಗೆ ಕೋವಿಡ್ ಅನುಮಾನ: ಸೋಂಕಿತರ ಸಂಖ್ಯೆ ೬೭೧ಕ್ಕೆ ಹೆಚ್ಚಳ  

ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸರಣಿ ಇನ್ನೂ ನಿಂತ್ತಿಲ್ಲ. ಶನಿವಾರವೂ ಐವರು ಅಸುನೀಗಿದ್ದು, ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದರೆ, ಇನ್ನೂ ಮೂವರ ವರದಿ ಬರಬೇಕಿದೆ. ಇದಲ್ಲದೇ ಹೊಸದಾಗಿ ೧೩ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 

  ಐವರ ಸಾವಿಗೆ ಕೋವಿಡ್ ಅನುಮಾನ: ಸೋಂಕಿತರ ಸಂಖ್ಯೆ ೬೭೧ಕ್ಕೆ ಹೆಚ್ಚಳ  

     

ನಾಡನುಡಿ ನ್ಯೂಸ್ 
ಬಾಗಲಕೋಟೆ ಜು.೧೮: 
ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸರಣಿ ಇನ್ನೂ ನಿಂತ್ತಿಲ್ಲ. ಶನಿವಾರವೂ ಐವರು ಅಸುನೀಗಿದ್ದು, ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದರೆ, ಇನ್ನೂ ಮೂವರ ವರದಿ ಬರಬೇಕಿದೆ. ಇದಲ್ಲದೇ ಹೊಸದಾಗಿ ೧೩ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 
 ಶನಿವಾರ ಮೃತಪಟ್ಟವರಲ್ಲಿ ಬಾಗಲಕೋಟೆಯ ವಾರ್ಡ್ ನಂ.೬ರ ೬೩ ವರ್ಷದ ಮಹಿಳೆ, ಜಮಖಂಡಿಯ ೫೨ ವರ್ಷದ ಪುರುಷ, ಅಮಲಝರಿಯ ೫೬ ವರ್ಷ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ೭೨ ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆ ಬಳಲುತ್ತಿದ್ದ, ಜು.೧೧ರಂದು ಬಾಗಲಕೋಟೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ. ಜು.೧೬ರಂದು ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ೬೦ ವರ್ಷದ ಮಹಿಳೆಯೂ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಈ ಎಲ್ಲ ಪ್ರಕರಣಗಳಲ್ಲಿ ಕೋವಿಡ್ ದೃಢಪಟ್ಟಲ್ಲಿ ಸಾವಿನ ಸಂಖ್ಯೆ ೩೪ಕ್ಕೆ ಏರಿದಂತಾಗಲಿದೆ.  
 
         ೧೩ ಜನರಲ್ಲಿ ಸೋಂಕು: ಸುಮಾರು ಹತ್ತು ದಿನಗಳ ನಂತರ ಕಡಿಮೆ ಸಂಖ್ಯೆಯ ಸೋಂಕಿತರ ಪಟ್ಟಿ ಬಿಡುಗಡೆಯಾಗಿದ್ದು, ಬಾಗಲಕೋಟೆ ೧೧, ರಬಕವಿ ಹಾಗೂ ಮುಧೋಳದ ತಲಾ ಒಬ್ಬರು ಸೇರಿ ೧೩ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಬಕವಿಯ ಕಂಬಳಿ ಬಜಾರ್ ಎದುರಿನ ನಿವಾಸಿ ೬೦ ವರ್ಷದ ಮಹಿಳೆ, ಲೋಕಾಪುರದ ಶ್ರೀನಿವಾಸ ಚಿತ್ರ ಮಂದಿರ ಎದುರಿನ ನಿವಾಸಿ ೬೦ ವರ್ಷದ ಮಹಿಳೆಗೆ ಸೋಂಕು ತಗುಲಿದೆ.
 ಬಾಗಲಕೋಟೆ ನಗರದ ವಾರ್ಡ್ ೫ರ ೬೨ ವರ್ಷದ ನಿವಾಸಿ ಪಿ-೫೭೭೯೧, ಹಳೆ ಬಾಗಲಕೋಟೆಯ ೩೯ ವರ್ಷ ಪುರುಷ ಪಿ-೫೭೯೨೬, ವಿದ್ಯಾಗಿರಿ ೧೮ನೇ ಕ್ರಾಸಿನ ೫೫ ವರ್ಷದ ಪುರುಷ ಪಿ-೫೮೨೧೧, ಹಳಪೇಟೆ ಓಣಿ ೬೦ ವರ್ಷ ಪಿ-೫೮೨೧೩, ಇಂಗಳಗಿಯ ೫೦ ವರ್ಷದ ಮಹಿಳೆ ಪಿ-೫೮೨೧೫, ನವನಗರದ ಸೆಕ್ಟರ್ ನಂ.೮ ೩೫ ವರ್ಷದ ಪುರುಷ ಪಿ-೫೮೨೧೮, ಬಾಗಲಕೋಟೆ ವಾರ್ಡ್ ನಂ.೧೦ರ ೨೮ ವರ್ಷದ ಯುವಕ ಪಿ-೫೮೨೨೦, ಸೆಕ್ಟರ್ ನಂ.೩೫ರ ಹನುಮಾನ ದೇವಸ್ಥಾನ ಎದುರಿಗಿನ ೪೫ ವರ್ಷದ ಪುರುಷ ಪಿ-೫೮೨೨೭, ವಿದ್ಯಾಗಿರಿ ಸಾಯಿಬಾಬಾ ಮಂದಿರ ಎದುರಿನ ೨೮ ವರ್ಷದ ಯುವಕ ಪಿ-೫೮೫೩೧, ನವನಗರ ಪೊಲೀಸ್ ಸಿಬ್ಬಂದಿ ೨೯ ವರ್ಷದ ಪಿ-೫೮೫೪೨, ಕೇಸನೂರ ಪುನರ್ವಸತಿ ಕೇಂದ್ರದ ೬೦ ವರ್ಷದ ಮಹಿಳೆ ಪಿ-೫೯೨೪೫ ಅವರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೬೭೧ಕ್ಕೆ ಏರಿದಂತಾಗಿದೆ. 

         
          
         ತಪಾಸಣೆ ನಡೆಯದಿದ್ದರೂ ಪಾಸಿಟಿವ್: ನಗರದ ಪೊಲೀಸ್ ಸಿಬ್ಬಂದಿಯೊಬ್ಬರು ಪರೀಕ್ಷೆಗೆ ಒಳಗಾಗದಿದ್ದರೂ ಅವರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೂರವಾಣಿ ಮಾಹಿತಿ ನೀಡಿ ಎಡವಟ್ಟು ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯ ೫೪ ವರ್ಷದ ಪೇದೆಗೆ ದೂರವಾಣಿ ಕರೆ ಬಂದಾಗ ನಾನು ಟೆಸ್ಟ್ ಮಾಡಿಸಿಯೇ ಇಲ್ಲ ನನ್ನನ್ನು ಏಕೆ ಕರೆಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.