*ಆದರ್ಶದ ವ್ಯಕ್ತಿಗಳಿಗೆ ಸಂಘರ್ಷದ ಅವಶ್ಯಕತೆ ಇರಲಿಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ*
ಬಸವನಾಡಿನ ಲಿಂಗಾಯತ ಪಂಚಮಸಾಲಿಪೀಠದ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಮನ ನೆಲಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ವೈಚಾರಿಕತೆ ನೆಲೆಯಲ್ಲಿ ಅವರು ಆಡಿರುವ ಮಾತುಗಳ ಸಂಪೂರ್ಣ ಹೂರಣ ಇಲ್ಲಿದೆ ಓದಿ
ಬಾಗಲಕೋಟೆ: ಇಪ್ಪತ್ತು ವರ್ಷಗಳ ಹಿಂದೆ ರಾಮಲಲ್ಲಾ ದರ್ಶನ ಪಡೆದಾಗ ಅಯೋಧ್ಯೆಯನ್ನು ನೋಡಿ ಮರುಗಿದ್ದೆ ಆದರೆ ಅಲ್ಪಾವಧಿಯಲ್ಲಿ ಅಯೋಧ್ಯೆ ಬದಲಾಗಿರುವುದು ಈ ನೆಲದ ಶಕ್ತಿ ತೋರಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ.ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಕನ್ನಡದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು ರಾಮ ಮಂದಿರ ವಿಚಾರ ನ್ಯಾಯಾಲಯದ ಮೂಲಕ ಸೌಹಾರ್ದಯುತವಾಗಿ ಪರಿಹಾರ ಕಂಡಿದೆ. ಭಾರತೀಯರೆಲ್ಲರೂ ಒಪ್ಪಿದ್ದಾರೆ. ಜಾತಿ, ಜನಾಂಗ, ಧರ್ಮ ಏನೇಯಿದ್ದರೂ ಸಂವಿಧಾನ, ನ್ಯಾಯಾಲಯ ಅಂತಿಮ ಅನ್ನೋದು, ಗೌರಬಿಸಬೇಕೆಂಬುದು ಕೂಡ ಸಾಬೀತಾಗಿದೆ ಎಂದರು.
ಶೈವರು ಶಿವ, ಇಷ್ಟಲಿಂಗವನ್ನು, ವೈಷ್ಣವರು ರಾಮನನ್ನು ಅರಾಧಿಸುತ್ತಾರೆ. ದೇವನೊಬ್ಬ ನಾಮ ಹಲವು ಎಂಬುದನ್ನು ನಾವು ಗಮನಿಸಬೇಕು. ಪರಿವರ್ತನೆ ಎಲ್ಲರೂ ಹೊಂದಬೇಕು. ಪರಿವರ್ತನೆ ಜಗದ ನಿಯಮ ಎಂದರು.
ರಾಮ ಮಂದಿರ ಲೋಕಾಪರ್ಣೆಗೆ ಎಲ್ಲ ನೆಲ್ಲ, ಧರ್ಮ ಆಚರಣೆಗಳು ಸಂತರು ಬಂದಿದ್ದಾರೆ ಈ ಮೂಲಕ ಏಕತೆಯನ್ನು ಕಾರ್ಯಕ್ರಮ ಸಾರಿದೆ. ಕಾರ್ಯಕ್ರಮದಲ್ಲಿ ಸಂತಸದಿಂದ ಭಾಗಿ ಆಗುತ್ತಿದ್ದೇನೆ ಎಂದರು.
ಒಂದು ಕಡೆ ರಾಮನ ಮಂದಿರ ನಿರ್ಮಾಣ ವಾದರೆ, ಕರ್ನಾಟಕದಲ್ಲಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ರಾಜ್ಯ ಸರ್ಕಾರ ಘೋಷಿಸಿದೆ ಎರಡೂ ವಿಚಾರ ಖುಷಿ ಕೊಟ್ಟಿದೆ ಎಂದರು.
ರಾಮನಂಥ ಆದರ್ಶ ವ್ಯಕ್ತಿಗಳಿಗೆ ಸಂಘರ್ಷ ಉಂಟಾಗಬಾರದಿತ್ತು, ಈಗ ಸೌಹಾರ್ದಯುತವಾಗಿ ನೆಲೆ ಕಾಣುತ್ತಿರುವುದು ಸಂತಸ ಕೊಟ್ಟಿದೆ ಎಂದರು.