ರಂಗೇರುತ್ತಿದೆ ಕೋಟೆನಗರಿ ಹೋಳಿ... ಮಾ.೨೭ರಿಂದ ಹಬ್ಬದಾಟ... ಹಲಗೆ ಮಜಲುಗಳಿಗೂ ಸಿದ್ಧತೆ
ಬಾಗಲಕೋಟೆ ಮಾ.೧೫:
ಐತಿಹಾಸಿಕ ಹೋಳಿ ಹಬ್ಬದ ಆಚರಣೆಗೆ ಸಿದ್ಧತೆಗಳು ಆರಂಭಗೊAಡಿದ್ದು, ಅಮವಾಸ್ಯೆ ಮುಗಿಯುತ್ತಿದ್ದಂತೆ ನಗರದೆಲ್ಲೆಡೆ ಹಲಗೆವಾದನದ ಸದ್ದು ಜೋರಾಗಿದೆ. ಮಾ.೨೭ರ ಸಂಜೆ ಹಬ್ಬಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಮಾ.೨೮ರಂದು ನಗರದಲ್ಲಿ ಕಾಮದನ ನಡೆಯಲಿದೆ.
ಹೋಳಿ ಆಚರಣೆಗೂ ಹದಿನೈದು ದಿನ ಪೂರ್ವದಲ್ಲಿ ಶಿವರಾತ್ರಿ ಅಮವಾಸ್ಯೆ ದಿನದಿಂದಲೇ ಹಲಗೆ ವಾದನ ಶುರುವಾಗಿದೆ. ನಗರದ ವಿವಿಧೆಡೆ ಹಲಗೆ ಮಜಲುಗಳನ್ನು ಆಯೋಜಿಸಲಾಗುತ್ತಿದ್ದು, ಮಾ.೨೯ರಿಂದ ಮೂರು ದಿನದ ಬಣ್ಣದಾಟ ಸೇರಿ ಒಟ್ಟು ಐದು ದಿನದ ಸಂಭ್ರಮದ ಆಟಕ್ಕೆ ಮುಳುಗಡೆ ನಗರಿ ಅಣಿಯಾಗಿದೆ.
ಹೋಳಿ ಆಚರಣೆ ಕುರಿತಂತೆ ಮಾ.೧೬ರಂದು ಸಂಜೆ ಎಂಜಿ ರಸ್ತೆಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಈ ಬಾರಿ ಹಬ್ಬದ ರೂಪುರೇಷೆಗಳನ್ನು ಅಲ್ಲಿಯೇ ತೀರ್ಮಾನಿಸಲಾಗುತ್ತದೆ. ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಉಪಾಧ್ಯಕ್ಷ ಸದಾನಂದ ನಾರಾ, ಸಂಘಟನಾ ಕಾರ್ಯದರ್ಶಿ ಸಂಜೀವ ವಾಡ್ಕರ, ಕಾರ್ಯದರ್ಶಿ ಮಹಾಬಳೇಶ ಗುಡಗುಂಟಿ ತಿಳಿಸಿದ್ದಾರೆ.
ಮಾ.೨೯ರಂದು ಕಿಲ್ಲಾ ಓಣಿಯ ಬಣ್ಣದಾಟ ನಡೆಯಲಿದ್ದು, ಮಾ.೩೦ರಂದು ವೆಂಕಟಪೇಟೆ, ಹಳಪೇಟೆ ಹಾಗೂ ಜೈನಪೇಟೆ ಓಣಿಗಳ ಬಣ್ಣದಾಟ ನಡೆಯಲಿದೆ. ಮಾ.೩೧ರಂದು ಹೊಸಪೇಟೆಯ ಬಣ್ಣದಾಟದ ಮೂಲಕ ಮೂರು ದಿನಗಳ ಓಕಳಿ ಆಟ ಮುಗಿಯಲಿದ್ದು, ಏ.೧ರಂದು ಹೊಸಪೇಟೆಯ ಸೋಗಿನೊಂದಿಗೆ ಉತ್ಸವ ಕೊನೆಗೊಳ್ಳಲಿದೆ. ಬಾಗಲಕೋಟೆಯವರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ಈ ಬಾರಿ ಉತ್ಸವಕ್ಕೆ ಸಾಂಸ್ಕೃತಿಕ ಮಾನ್ಯತೆ ನೀಡುವುದಾಗಿ ಘೋಷಿಸಿದ್ದು, ಮೂರು ದಿನಗಳು ಖ್ಯಾತ ಕಲಾವಿದರ ನಗೆಹಬ್ಬ, ಗಾಯನ ಕಾರ್ಯಕ್ರಮಕ್ಕೆ ಕಲಾವಿದರ ಆಯ್ಕೆಗೆ ಕಲಾಗ್ರಾಮದ ನಿರ್ದೇಶಕ ಮಾಲತೇಶ ಭಟ್ ಅವರಿಗೆ ಸೂಚನೆ ನೀಡಿದ್ದು, ಇವೆಲ್ಲವೂ ಇನ್ನೂ ಕಾರ್ಯಗತಗೊಳ್ಳಬೇಕಾಗಿದೆ.
ಆದರೆ ನೆರೆ ರಾಜ್ಯಗಳಲ್ಲಿ ಕೊರೊನಾ ಅಬ್ಬರ ಹೆಚ್ಚುತ್ತಿದ್ದು, ಅದರ ಮಂಕು ಇನ್ನೂ ಇರುವುದರಿಂದ ಜಿಲ್ಲಾಡಳಿತದ ಸ್ಪಂದನೆ ಯಾವ ರೀತಿ ಇರಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಹಳೆಪೇಟೆಯಲ್ಲಿ ಹಲಗೆ ಮಜಲು: ಹಳೆಪೇಟೆಯ ಹನುಮಂತನ ಗುಡಿ ಮುಂಭಾಗ ಮಾ.೧೮ರಂದು ಹಲಗೆ ಮಜಲು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ನಂತರ ಹೋಳಿ ಇತಿಹಾಸ, ಸಂಸ್ಕೃತಿ ಕುರಿತಂತೆ ಮುಖ್ಯ ಭಾಷಣವೂ ಇರಲಿದೆ. ಸ್ಪರ್ಧೆಯಲ್ಲಿ ವಿತೇರಾಗುವ ಸ್ಪರ್ಧಿಗಳಿಗೆ ಪ್ರಥಮ ಬಹುಮಾನವಾಗಿ ೫೦೦೧, ದ್ವಿತೀಯ ಬಹುಮಾನವಾಗಿ ೩೦೦೧ ಹಾಗೂ ತೃತೀಯ ಬಹುಮಾನವಾಗಿ ೧೦೦೧ ರೂ.ಗಳನ್ನು ನೀಡಲಾಗುತ್ತಿದೆ. ಮಾಹಿತಿಗೆ ಮೊ: ೮೧೫೨೯ ೦೩೯೦೩, ೯೯೦೦೧ ೨೨೧೬೫, ೯೭೩೧೧ ೩೫೬೭೫ ಸಂಪರ್ಕಿಸಬಹುದು.
ಮಾಧವ ಸೇವಾ ಕೇಂದ್ರದಿಂದ ಹಲಗೆ ಮಜಲು :ಮಾ.೨೦ರಂದು ನಗರದ ಹೊಳೆ ಆಂಜನೇಯ ದೇವಸ್ಥಾನದ ಬಳಿ ಮಾಧವ ಸೇವಾ ಕೇಂದ್ರದಿಂದ ಹಲಗೆ ಮಜಲು ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಸಮವಸ್ತ್ತ್ರ ಧರಿಸಿದ ೧೩ ಕಲಾವಿದರಂತೆ ತಂಡಗಳಿಗೆ ಸಂಖ್ಯಾ ಮಿತಿ ವಿಧಿಸಲಾಗಿದೆ. ೭ ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಮೊದಲ ಬಹುಮಾನವಾಗಿ ೧೧೦೦೧, ದ್ವಿತೀಯ ೮೦೦೧, ತೃತೀಯ ೫೦೦೧ ರೂ. ಹಾಗೂ ಐದು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ಕೇಂದ್ರದ ಮುಖ್ಯಸ್ಥ ನಾಗರಾಜ ಹದ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಬಾಗಲಕೋಟೆ ನಗರ: ನಾಗರಾಜ ಹದ್ಲಿ- ೮೮೬೭೧ ೬೫೬೦೫, ಅನಿಲ ವಾಡಕರ-೭೪೧೧೫ ೩೧೩೧೬, ಚೆನ್ನವೀರ ಅಂಗಡಿ- ೯೭೩೧೧ ೦೦೭೬೭ ವಿದ್ಯಾಗಿರಿ: ಕೇಶವ ಕುಲಕರ್ಣಿ- ೯೫೩೮೩ ೨೫೮೮೦, ಸಂದೀಪ ಬೆಳಗಲ್- ೯೯೭೨೬ ೫೬೫೭೧, ನವನಗರ ಅರವಿಂದ ನಾವಲಗಿ- ೯೬೨೦೫ ೮೮೬೧೬, ಶಿವಾನಂದ ಮಲ್ಲಾಪುರ-೯೮೮೦೬ ೬೧೯೧೦, ಮಲ್ಲು ಅವರಾದಿ- ೯೯೮೦೦ ೦೧೧೨೬