ಸ್ವಯಂ ಬೆಳೆ ಸಮೀಕ್ಷೆ :ಗುರಿ ತಲುಪಲು ತೊಡಕಾದ ಮಳೆ, ತಾಂತ್ರಿಕ ಸಮಸ್ಯೆ 

ಸ್ವಯಂ ಬೆಳೆ ಸಮೀಕ್ಷೆ :ಗುರಿ ತಲುಪಲು ತೊಡಕಾದ ಮಳೆ, ತಾಂತ್ರಿಕ ಸಮಸ್ಯೆ 

ಅಭಯ ಮನಗೂಳಿ 
ಬಾಗಲಕೋಟೆ: 
ಸ್ವಯಂ ಬೆಳೆ ಸಮೀಕ್ಷೆ ಯೋಜನೆ ಶೇ.೮೭.೭೧ ಪ್ರಗತಿ ಸಾಧಿಸಿದ್ದು, ಮಾಹಿತಿ ದಾಖಲಿಸಲು ಇಂದು ಕೊನೆಯ ದಿನವಾಗಿದೆ. ಮಳೆ, ಪ್ರವಾಹದ ಆತಂಕದ ಮಧ್ಯೆಯೂ ಕೃಷಿ ಇಲಾಖೆ ಉತ್ತಮ ಸಾಧನೆ ತೋರಿದ್ದು, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಶೇ.೯೬.೬೨ ಮಾಹಿತಿ ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. 
 ನೆಟವರ್ಕ್ ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ವಯಂ ಬೆಳೆ ಸಮೀಕ್ಷೆ ಯೋಜನೆ ಎದುರಿಸಿತ್ತು. ಮೊದಲ ಬಾರಿಗೆ ರೈತರ ಮುಖಾಂತರವೇ ಮಾಹಿತಿ ದಾಖಲಿಸುವ ಯೋಜನೆ ಇದಾಗಿದ್ದರಿಂದ ಅದನ್ನು ನಿಭಾಯಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಇದರ ಮಧ್ಯೆ ಮಳೆ ಕೂಡ ಆರಂಭಗೊAಡಿದ್ದರಿAದ ಬೆಳೆಸಮೀಕ್ಷೆ ದಾಖಲಿಸುವುದು ಕಷ್ಟವಾಯಿತು. ಎಲ್ಲ ಸವಾಲುಗಳನ್ನೂ ಮೀರಿಯೂ ಶೇ.೮೭.೭೧ರಂದು ಸಾಧನೆ ಮಾಡಲಾಗಿದೆ. ಬೆಳೆ ಸಮೀಕ್ಷೆ ತೃಪ್ತಿಕರವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು. 
 ಭಾರೀ ಪ್ರಮಾಣದಲ್ಲಿ ಮಳೆ ಬಿದ್ದಿದ್ದರಿಂದಾಗಿ ಹೊಲಗಳಲ್ಲಿ ಇನ್ನೂ ನೀರು ನಿಂತಿದೆ. ಇಷ್ಟಾಗಿಯೂ ರೈತರನ್ನು ತಲುಪಿ ಬೆಳೆ ಸಮೀಕ್ಷೆ ಮಾಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಸಮೀಕ್ಷೆ ಬುಧವಾರ ಕೊನೆಗೊಳ್ಳುತ್ತಿದ್ದು, ಸಾಧ್ಯವಾಷ್ಟು ಮಟ್ಟಿಗೆ ಗುರಿ ತಲುಪಲಾಗುವುದು ಎಂದು ವಿವರಿಸಿದರು. 

 ಮಳೆ, ತಾಂತ್ರಿಕ ಸಮಸ್ಯೆ: ರೈತರು ತಮ್ಮ ಮೊಬೈಲ್ ಮೂಲಕವೇ ತಮ್ಮ ಬೆಳೆಯನ್ನು ದಾಖಲಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸ್ವಯಂ ಸಮೀಕ್ಷೆಯ ಯೋಜನೆಯನ್ನು ಸರ್ಕಾರ ರೂಪಿಸಿದೆ. ಆ.೧೩ ರಿಂದ ರಾಜ್ಯದಲ್ಲಿ ಸಮೀಕ್ಷೆ ಆರಂಭಗೊಡಿತು. ಆ.೧೪ ರಂದು ಜಿಲ್ಲೆಯಲ್ಲೂ ಯೋಜನೆಗೆ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿತ್ತು. ಆದರೆ ಕೆಲವು ಹಳ್ಳಿಗಳಲ್ಲಿ ಜಿಪಿಎಸ್ ಕಾರ್ಯನಿರ್ವಹಿಸುವುದು ಕಷ್ಟವಾಗುವುದರ ಜತೆಗೆ ಹಲವು ಹಳ್ಳಿಗಳಲ್ಲಿ ಡಿಜಿಟಲ್ ನಕ್ಷೆ ಸರಿಯಾಗಿ ರೂಪಗೊಳ್ಳದ ಕಾರಣ ಅದನ್ನು ನಿರ್ವಹಿಸುವುದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತು. ಇದನ್ನು ಇಲಾಖೆ ಗಮನಕ್ಕೆ ತಂದು ಸರಿಪಡಿಸಿಕೊಂಡು ತಾಂತ್ರಿಕ ಸಮಸ್ಯೆ ಎದುರಿಸಿದ ಹಳ್ಳಿಗಳಲ್ಲಿ ಮತ್ತೆ ಸಮೀಕ್ಷಾ ಕಾರ್ಯವನ್ನು ಮುಂದವರಿಸಲಾಯಿತು. 
 ಇದೆಲ್ಲವೂ ಸರಿ ಹೋಗುವ ಹೊತ್ತಿಗೆ ಮೊದಲು ಸರ್ಕಾರ ನೀಡಿದ್ದ ಗಡುವು ಮುಕ್ತಾಯಗೊಂಡಿತು. ರಾಜ್ಯದ ಇತರ ಜಿಲ್ಲೆಗಳಲ್ಲೂ ಪ್ರಗತಿ ಆಗದ ಕಾರಣ ಸೆ.೩೦ರವರೆಗೆ ಅವಧಿಯನ್ನು ಸರ್ಕಾರ ವಿಸ್ತರಿಸಿತ್ತು. ಇದೀಗ ಆ ಗಡವೂ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲೀ ಇನ್ನೂ ಶೇ.೧೨ ಸಮೀಕ್ಷಾ ಕಾರ್ಯ ಬಾಕಿ ಉಳಿದಿದೆ. ಸರ್ಕಾರ ಮತ್ತೊಮ್ಮೆ ಅವಧಿ ವಿಸ್ತರಿಸುವ ಯಾವ ಆದೇಶವನ್ನೂ ಮಾಡದ ಕಾರಣ ಮುಂದೇನು ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. 
 ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಭಾರೀ ಹಿನ್ನಡೆ ಆಗಿದೆ. ಕೃಷಿ ಭೂಮಿಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಶೇಖರಣೆ ಆಗಿರುವುದರಿಂದ ಸಮೀಕ್ಷಾ ಕಾರ್ಯಕ್ಕೂ ಅದು ಅಡ್ಡಿಯನ್ನುಂಟು ಮಾಡಿದೆ.  ಜಿಲ್ಲೆಯಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಸುಪ್ರವೈಸರ್‌ಗಳನ್ನಾಗಿ ಮಾಡಲಾಗಿದ್ದು, ೬೨೨ ಖಾಸಗಿ ನಿವಾಸಿಗಳಿಗೆ ತರಬೇತಿ ನೀಡಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಲಾಗಿದೆ. ಪ್ರತಿ ೯೦೦ ಪ್ಲಾಟ್‌ಗೆ ಒಬ್ಬರಂತೆ ಖಾಸಗಿ ನಿವಾಸಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರು ರೈತರಿಗೆ ಸ್ವಯಂ ಬೆಳೆ ಸಮೀಕ್ಷಾ ಕಾರ್ಯದಲ್ಲಿ ನೆರವಾಗುತ್ತಿದ್ದಾರೆ. 

 ಬಲು ಉಪಯೋಗ ಈ ಸಮೀಕ್ಷೆ :ಸ್ವಯಂ ಬೆಳೆ ಸಮೀಕ್ಷೆ ರೈತರಿಗೆ ಅತ್ಯಂತ ಮಹತ್ವದಾಗಿದ್ದು, ಹೆಚ್ಚು ಪ್ರಯೋಜಕನಾರಿ ಆಗಲಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಕಾರ್ಯದಲ್ಲಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲು, ಬೆಳೆ ವಿಮಾ ಯೋಜನೆ ಅಡಿ ಸರ್ವೆ ಸಂಖ್ಯೆವಾರು ಬೆಳೆ ಪರಿಶೀಲನೆ, ಕಟಾಔಉ ಪ್ರಯೋಗಗಳನ್ನು ಕೈಗೊಳ್ಳಲು, ಕನಿಷ್ಠ ಬೆಂಬಲ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರಿತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕೆ ಈ ಸಮೀಕ್ಷೆ ಅನುಕೂಲ ಕಲ್ಪಿಸಲಿದೆ. 
 

       
 ತಾಲೂಕಾವಾರು ಸಮೀಕ್ಷೆಯ ಪ್ರಗತಿ ವಿವರ: ರಬಕವಿ-ಬನಹಟ್ಟಿ ತಾಲೂಕು ಶೇ.೯೬.೬೨, ಮುಧೋಳ ಶೇ.೯೨.೪೧, ಜಮಖಂಡಿ ೯೦.೦೫, ಇಳಕಲ್ ಶೇ.೭೪.೦೬, ಹುನಗುಂದ ಶೇ.೮೧.೩೧, ಗುಳೇದಗುಡ್ಡ ೮೭.೫೪, ಬೀಳಗಿ ಶೇ.೯೦.೧೬, ಬಾಗಲಕೋಟೆ ಶೇ.೭೯.೮೧, ಬಾದಾಮಿ ಶೇ.೮೯.೪೫ ರಷ್ಟು ಸಮೀಕ್ಷಾ ಕಾರ್ಯಪೂರ್ಣಗೊಂಡಿದೆ. ಬೀಳಗಿ ತಾಲೂಕಿನ ಕೆಲವು ಮುಳುಗಡೆ ಪ್ರದೇಶಕ್ಕೆ ಹೊಂದಿಕೊAಡಿರುವ ಸ್ಥಳಗಳಿಗೆ ತೆಪ್ಪದಲ್ಲಿ ತೆರಳಿಯೂ ಸಿಬ್ಬಂದಿ ಸಮೀಕ್ಷಾ ಕಾರ್ಯ ಮಾಡಿದ್ದಾರೆ. ಇನ್ನೂ ಬೆಳೆದರ್ಶಕ್ ಆಪ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ರೈತರಿಗೆ ಅ.೧೫ರವರೆಗೆ ಅವಕಾಶ ಕಲ್ಪಿಸಲಾಗಿದೆ. 


            

             
ಸ್ವಯಂ ಬೆಳೆ ಸಮೀಕ್ಷೆಯಲ್ಲಿ ಮಂಗಳವಾರದವರೆಗೆ ಜಿಲ್ಲೆ ಶೇ.೮೭.೭೧ ಸಾಧನೆ ಮಾಡಿದೆ. ಮಳೆ, ಕೆಲವು ತಾಂತ್ರಿಕ ಅಡಚಣೆಗಳ ಮಧ್ಯೆಯೂ ಪರಿಣಾಮಕಾರಿಯಾಗಿ ಸಮೀಕ್ಷೆ ಕಾರ್ಯಕೈಗೊಳ್ಳಲಾಗಿದೆ. ಕೃಷಿಕರು ಸ್ವಯಂ ದಾಖಲೆಗೆ ಅವಕಾಶ ನೀಡಲಾಗಿದ್ದು, ಅವರು ಸಹ ಉತ್ಸುಕತೆಯಿಂದ ಭಾಗವಹಿಸಿದ್ದಾರೆ. 
ಚೇತನಾ ಪಾಟೀಲ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ