ಆಕ್ಸಿಜನ್ ಪೂರೈಕೆ: ಸ್ವತಾ ಫೀಲ್ಡಿಗಿಳಿದು ಪರಿಶೀಲನೆಗೆ ಮುಂದಾದ ಶಾಸಕ ಚರಂತಿಮಠ 

ಆಕ್ಸಿಜನ್ ಪೂರೈಕೆ: ಸ್ವತಾ ಫೀಲ್ಡಿಗಿಳಿದು ಪರಿಶೀಲನೆಗೆ ಮುಂದಾದ ಶಾಸಕ ಚರಂತಿಮಠ 

ನಾಡನುಡಿ ನ್ಯೂಸ್ 
ಬಾಗಲಕೋಟೆ ಮೇ ೪:
ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸ್ವತಾ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಫೀಲ್ಡಿಗಿಳಿದಿದ್ದಾರೆ.

ಡಿಸಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಎಸ್.ಪಿ.ಲೋಕೇಶ ಜಗಲಾಸರ್ ಅವರ ಜತೆಗೂಡಿ ಆಕ್ಸಿಜನ್ ಮಾರಾಟ ಕೇಂದ್ರಗಳಿಗೆ ತೆರಳಿದ ಅವರು ಅಲ್ಲಿರುವ ಆಕ್ಸಿಜನ್ ಲಭ್ಯತೆಯನ್ನು ಪರಿಶೀಲಿಸಿದರು.

ಬಾದಾಮಿ ರಸ್ತೆಯ ಆಕ್ಸಿಜನ್ ಕೇಂದ್ರದಲ್ಲಿ ಲಭ್ಯವಿದ್ದ ೧೫ ಟನ್ ಆಕ್ಸಿಜನ್ ಪೈಕಿ ೩ ಟನ್ ನಷ್ಟು ಆಕ್ಸಿಜನ್ ಅನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲು ಕೇಂದ್ರದ ಮಾಲೀಕರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಆಕ್ಸಿಜನ್ ಮಾರಾಟ ಕೇಂದ್ರದ ಮುಖ್ಯಸ್ಥರು ಶಾಸಕರು, ಅಧಿಕಾರಿಗಳೊಂದಿಗೆ ಮಾತನಾಡಿ, ಬೇಡಿಕೆ ತಕ್ಕಷ್ಟು ಲಭ್ಯವಿರುವ ಆಕ್ಸಿಜನ್ ನೋಡಿಕೊಂಡು ಪೂರೈಸಲಾಗುತ್ತಿದೆ ಎಂದರು.