ಬೀಳಗಿ ಬಳಿ ರಸ್ತೆ ಅಪಘಾತ: ನಾಲ್ವರು ಸಾವು

ಬೀಳಗಿ ಬಳಿಯ ಬಾಡಗಂಡಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ

ಬೀಳಗಿ ಬಳಿ ರಸ್ತೆ ಅಪಘಾತ: ನಾಲ್ವರು ಸಾವು

ಬಾಗಲಕೋಟೆ :  ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೨೧೮ರಲ್ಲಿ ನಡೆದಿದೆ. ನಿನ್ನೆ ತಡರಾತ್ರಿ 
ರಸ್ತೆಯಲ್ಲಿ ಕ್ಯಾಂಟರ್ ಪಂಚರ್ ತಿದ್ದಿಸಲು ನಿಂತಿದ್ದ ವೇಳೆ  
ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಬೀಳಗಿ ಮೂಲದ ರಜಾಕ್ ತಾಂಬೊಳೆ, ನಾಶಿರ್  ಮುಲ್ಲಾ, ಮಲ್ಲಪ್ಪ ಮಳಲಿ ಹಾಗೂ ರಾಮಸ್ವಾಮಿ ಮೃತಪಟ್ಟವರು. ಘಟನೆ ಕುರಿತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ನನಗೆ ಬಹಳ ಆಘಾತ ಹಾಗೂ ದುಃಖವಾಯಿತು. ಈ ದುರಂತ ಸಂಭವಿಸಬಾರದಿತ್ತು. ಆಕಸ್ಮಿಕವಾಗಿ ಸಂಭವಿಸಿದೆ. ಮೃತರ ಆತ್ಮಕ್ಕೆ ದೇವರು ಶಾಂತಿ ಕೊಡಲಿ. ಮೃತರ ಕುಟುಂಬಕ್ಕೆ ಆ ದೇವರು ದುಃಖವನ್ನು ಭರಿಸುವಂತಹ ಶಕ್ತಿ ಕೊಡಲಿ ಅಂತ ಸಚಿವ ಮುರುಗೇಶ್ ನಿರಾಣಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಅಲ್ಲದೇ, ಮೃತರ ಕುಟುಂಬಕ್ಕೆ ಹಾಗೂ ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರದಿಂದ ಪರಿಹಾರ ಧನ ಒದಗಿಸಲು ಪ್ರಯತ್ನಿಸುವೆ ಎಂದರು.