ಹುನಗುಂದ ಬಳಿ ರಸ್ತೆ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು
ಬಾಗಲಕೋಟೆ: ಹುನಗುಂದ ತಾಲೂಕಿನ ಧನ್ನೂರ ಟೋಲ್ ನಾಕಾ ಬಳಿ ಗುರುವಾರ ಬೆಳಗಿನ ಜಾವ ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತ ಪಟ್ಟಿರುವ ದಾರುಣ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಗುತ್ತಿಗೆದಾರ ಲಕ್ಷ್ಮಣ ವಡ್ಡರ, ಬೈಲಪ್ಪ ಬಿರಾದಾರ, ಕಾರು ಚಾಲಕ ಮಹ್ಮದರಫೀಕ ಗುಡ್ನಾಳ, ಮುದ್ದೇಬಿಹಾಳದ ರಾಮಣ್ಣ ನಾಯಕಮಕ್ಕಳ ಮೃತಪಟ್ಟವರು.
ಲಾರಿ- ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಕಾರು ನಜ್ಜುಗುಜ್ಕಾಗಿದೆ.
ನಾಲ್ವರು ಹೊಸಪೇಟೆ ಬಳಿಯ ಸುಕ್ಷೇತ್ರ ಹುಲಿಗೆಮ್ಮನ ದೇವಸ್ಥಾನದ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಹುನಗುಂದ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.