ಅನ್ನ ಪ್ರಸಾದ ಸ್ವೀಕರಿಸಿ ೫ ಸಾವಿರ ದೇಣಿಗೆ ನೀಡಿದ ರಾಗಾ

Bagalkot, dasoha Bhavana, devotee, Rahul Gandhi, Kudal sangam

ಅನ್ನ ಪ್ರಸಾದ ಸ್ವೀಕರಿಸಿ ೫ ಸಾವಿರ ದೇಣಿಗೆ ನೀಡಿದ ರಾಗಾ

ಬಾಗಲಕೋಟೆ: ಬಸವ ಜಯಂತಿ ಪ್ರಯುಕ್ತ ಕೂಡಲಸಂಗಮಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಾಸೋಹ ಭವನದಲ್ಲಿ ಸಾಮೂಹಿಕ ಪ್ರಸಾದ ಸ್ವೀಕರಿಸಿದರು.

ವಿಪಕ್ಷ ನಾಯಕರ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ‌, ಎಂ.ಬಿ.ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಗಣ್ಯರೊಂದಿಗೆ ಭೇಟಿ ನೀಡಿದ ಅವರು ಅನ್ನ ಪ್ರಸಾದ ಸ್ವೀಕರಿಸಿ  ತಮ್ಮ ಹೆಸರಿನಲ್ಲಿ ೫ ಸಾವಿರ ರೂ.ಗಳ ದೇಣಿಗೆಯನ್ನೂ ನೀಡಿದರು.