ಫೇಸ್ಬುಕ್ ಎಮೋಜಿ: ಯುವಕನಿಗೆ ಚೂರಿ ಇರಿತ
ನಾಡನುಡಿ ನ್ಯೂಸ್
ಬಾಗಲಕೋಟೆ:
ಯುವಕನೋರ್ವನ ಮೇಲೆ ೧೫ ಜನರ ಗುಂಪು ಚೂರಿ ಇರಿದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಶನಿವಾರ ತಡರಾತ್ರಿ ೧೫ ಜನರ ಗುಂಪು ಪ್ರಕಾಶ ಲೋಣಾರೆ (೨೬)ಎಂಬಾತನ ಮೇಲೆ ವೆಂಕಟಪೇಟೆಯ ಕೃಷ್ಣಾ ಟಾಕೀಸ್ ಬಳಿ ಹಲ್ಲೆ ನಡೆಸಿದ್ದು, ಸದ್ಯ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.
ಟಿಪ್ಪು ಸುಲ್ತಾನ್ ಕುರಿತಾದ ಪೋಸ್ಟ್ ಒಂದಕ್ಕೆ ಯುವಕ ಸ್ಮೈಲಿ ಎಮೋಜಿಯನ್ನು ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದೆ ಹಲ್ಲೆಗೆ ಕಾರಣ ಎನ್ನಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾಸ್ಪತ್ರೆಗೆ ದಾಖಲಾದ ಯುವಕನನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಭೇಟಿ ಮಾಡಿದ್ದು, ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಹಿಂದೂಪರ ಸಂಘಟನೆಗಳ ಮುಖಂಡ ಬಸವರಾಜ ಸಿದ್ಲಿಂಗಪ್ಪನವರ ಸಹ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.