ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ: ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಚರಂತಿಮಠ..?

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಡಾ.ಚರಂತಿಮಠ ಹೆಸರು ಪ್ರಸ್ತಾಪವಾಗಿತ್ತು. ಅದನ್ನು ಬೇರೊಬ್ಬರಿಗೆ ಬಿಟ್ಟುಕೊಡಲು ಅವರು ನಿರ್ಧರಿಸಿದ್ದಾರೆ.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ: ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಚರಂತಿಮಠ..?

ನಾಡನುಡಿ ನ್ಯೂಸ್ 

ಬಾಗಲಕೋಟೆ:

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಹೆಸರು ಪ್ರಸ್ತಾಪವಾಗಿದ್ದು , ಅದನ್ನು ನಿರಾಕರಿಸಿರುವ ಅವರು ಮತ್ತೊಬ್ಬರ ಹೆಸರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಬವಿವ ಸಂಘದ ಕಾರ್ಯಾಧ್ಯಕ್ಷರಾಗಿರುವ ಡಾ.ಚರಂತಿಮಠ ಅವರು ವೀರಶೈವ-ಲಿಂಗಾಯತ ಸ್ಚಾಮೀಜಿಗಳು, ಮುಖಂಡರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.

ಸಮಾಜದಲ್ಲೂ ಪ್ರಭಾವ ಹೊಂದಿರುವ ಅವರು ವೀರಶೈವ-ಲಿಂಗಾಯತ ತತ್ವ, ಇತಿಹಾಸವನ್ನು ಸಂಪೂರ್ಣ ಬಲ್ಲವರಾಗಿದ್ದಾರೆ.

ವೀರಶೈವ ಮಹಾಸಭಾದಲ್ಲೂ ತಮ್ಮದೇ ಪ್ರಭಾವ ಹೊಂದಿದ್ದಾರೆ.

ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚರಂತಿಮಠ ಅವರಿಗೆ ಪ್ರಾಧಿಕಾರದ ಸಾರಥ್ಯ ವಹಿಸುವಂತೆ ಸೂಚಿಸಿದ್ದು, ಅದನ್ನು  ಬೆಂಗಳೂರಿನ ಬಿ.ಎಸ್‌.ಪರಮಶಿವಯ್ಯ ಅವರಿಗೆ ಬಿಟ್ಟುಕೊಡಲು ನಿರ್ಧರಿಸಿ ಅವರದೇ ಹೆಸರನ್ನು ಸಿಎಂಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ‌.

ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯಾಧ್ಯಕ್ಷರಾಗಿರುವ ಪರಮಶಿವಯ್ಯ ಅವರು ಬೆಂಗಳೂರಿನಲ್ಲಿ ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೇ ಪ್ರಾಧಿಕಾರಕ್ಕೆ ಸೂಕ್ತ. ಸಮಾಜ ಸಂಘಟನೆಯಲ್ಲೂ ಅವರನ್ನು ಇನ್ನಷ್ಟು ಬಳಸಿಕೊಳ್ಳಬಹುದು ಎಂದು ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ.ಹೊಸ  ಪ್ರಾಧಿಕಾರಕ್ಕೆ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.