ಗಣೇಶ ಉತ್ಸವ ಅದ್ದೂರಿ ಬೇಡ.... ಸರಳತೆ, ಭಕ್ತಿಯಿಂದ ಕೂಡಿರಲಿ.....

ಈ ಬಾರಿಯ ಗಣೇಶ ಉತ್ಸವ ಸರಕಾರ ರೂಪಿಸಿರುವ ನೀತಿ, ನಿಯಮಾವಳಿಗಳ ಪ್ರಕಾರ ಆಚರಿಸಬೇಕೆಂದು ಈಗಾಗಲೇ ಆದೇಶ ಹೊರಬಿದ್ದಿದೆ, ಅದನ್ನು ಪ್ರತಿಯೊಬ್ಬರು ಪಾಲಿಸಿ ಈ ಮಹಾಮಾರಿಯ ವಿರುದ್ಧ ಸರಕಾರದೊಂದಿಗೆ ಕೈಜೋಡಿಸಬೇಕಾ ಗಿರುವದು ಪ್ರತಿಯೊಬ್ಬರ ಕರ್ತವ್ಯ, ಜವಾಬ್ದಾರಿಯಾಗಿದೆ. 

ಗಣೇಶ ಉತ್ಸವ ಅದ್ದೂರಿ ಬೇಡ....   ಸರಳತೆ, ಭಕ್ತಿಯಿಂದ ಕೂಡಿರಲಿ.....
ಅಗಸ್ಟ ೨೨ ರಂದು ಗಣೇಶ ಉತ್ಸವ. ಈಗಾಗಲೇ ವಿಘ್ನ ನಿವಾರಕ ಗಣೇಶನ ಪ್ರತಿಷ್ಠಾಪನೆಗೆ ಮನೆ ಮನೆಯಲ್ಲಿ, ಸಂಘ ಸಂಸ್ಥೆಗಳ ಆವರಣದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಿದ್ದತೆ ನಡೆದಿದೆ, ಅದರೆ ಈ ಬಾರಿ ಮಹಾಮಾರಿ ಕೋರೋನಾದ ಹಿನ್ನಲೆಯಲ್ಲಿ ಉತ್ಸವ ಶಾಂತಿಯುತವಾಗಿರಲಿ, ಸರಳತೆ ಇರಲಿ, ಭಕ್ತಿಯಿಂದ ಕೂಡಿರಲಿ ಆದರೆ ಅದ್ದೂರಿ ಬೇಡ. 
ಪ್ರತಿ ಸಲ ಗಣೇಶ ಉತ್ಸವ ಬಂತೆಂದರೆ ಅದು ಒಂದು ರೀತಿಯ ಅದ್ದೂರಿಯ ಹಬ್ಬ. ಉತ್ಸವ. ಈ ಉತ್ಸವ ದೇಶಾದ್ಯಂತ ಆಚರಿಸಲಾಗುತ್ತಿದೆ. ದೇಶದ ಮಹಾ ನಗರಗಳಲ್ಲಿ ಭವ್ಯ ಶ್ರೀ ಗಣೇಶನ ಪ್ರತಿಷ್ಠಾಪನೆ, ವಿವಿಧೆಡೆ ಅಲಂಕಾರಿಕ ಗಣಪತಿಗಳು, ವಿವಿಧ ವೇಷಗಳನ್ನು ಹಾಕಲಾಗುತ್ತಿತ್ತು. ಆದರೆ ಈ ಬಾರಿ ಈ ಉತ್ಸವಕ್ಕೆ ಕೋರೋನಾ ಮಂಕು ಕವಿದಿದೆ. ಕೋರೋನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಗಣೇಶ ಉತ್ಸವ ಅದ್ದೂರಿಯಾಗದೇ ಸರಳ ರೀತಿಯಿಂದ ಆಚರಿಸಬೇಕು, ಭಕ್ತಿಯಿಂದ ಆಚರಿಸಿ ಈ ಮಹಾಮಾರಿ ಕೋರೋನಾವನ್ನು ನಿವಾರಿಸಬೇಕೆಂದು ವಿಘ್ನನಿವಾರಕ ಶ್ರೀ ಗಣೇಶನಲ್ಲಿ ಪ್ರಾರ್ಥಿಸುತೆವೆ.
ಈ ಬಾರಿಯ ಗಣೇಶ ಉತ್ಸವ ಸರಕಾರ ರೂಪಿಸಿರುವ ನೀತಿ, ನಿಯಮಾವಳಿಗಳ ಪ್ರಕಾರ ಆಚರಿಸಬೇಕೆಂದು ಈಗಾಗಲೇ ಆದೇಶ ಹೊರಬಿದ್ದಿದೆ, ಅದನ್ನು ಪ್ರತಿಯೊಬ್ಬರು ಪಾಲಿಸಿ ಈ ಮಹಾಮಾರಿಯ ವಿರುದ್ಧ ಸರಕಾರದೊಂದಿಗೆ ಕೈಜೋಡಿಸಬೇಕಾ ಗಿರುವದು ಪ್ರತಿಯೊಬ್ಬರ ಕರ್ತವ್ಯ, ಜವಾಬ್ದಾರಿಯಾಗಿದೆ. 
ಕೊರೋನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಅಡ್ಡಿಯುಂಟಾಗಲಿದೆ ಎಂದು ಸಾರ್ವಜನಿಕರಿಂದ ವ್ಯಕ್ತವಾದ ಆಕ್ಷೇಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಪುನಸ್ಕಾರಕ್ಕೆ ಅವಕಾಶ ಕಲ್ಪಿಸಿದೆ.  ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ,ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೊರೋನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾ ಗಿದ್ದು ಪರಿಷ್ಕೃತ ಮಾರ್ಗಸೂಚಿ ಗಳನ್ವಯ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಲು ಸರಕಾರ ರಾಜ್ಯದ ಜನತೆಯಲ್ಲಿ ಮನವಿ ಮಾಡಿದೆ.
ಗಣೇಶ ಚತುರ್ಥಿಯನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕ ವಾಗಿ ತಮ್ಮ ಮನೆಗಳಲ್ಲಿ/ಸರ್ಕಾರಿ/ಖಾಸಗಿ /ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯಲ್ಲಿ ಆಚರಿಸಬಹುದು. ಸಾರ್ವಜನಿಕ ಸ್ಥಳದಲ್ಲಿ ಕನಿಷ್ಟ ೪ ಅಡಿಗೆ ಮೀರದಂತೆ ಹಾಗೂ ಮನೆಗಳಲ್ಲಿ ೨ ಅಡಿಗೆ ಮೀರದಂತೆ ಮೂರ್ತಿಯನ್ನು ಪ್ರತಿಷ್ಠಾಪಿಸುವುದು, ಗಣೇಶೋತ್ಸವ ಪ್ರತಿಷ್ಠಾ ಪನೆ ಸ್ಥಳದಲ್ಲಿ ಯಾವುದೇ ರೀತಿಯ ಮನೋರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ,ನೃತ್ಯ ಕಾರ್ಯಕ್ರಮ ಆಯೋಜನೆಗೆ ನಿಷೇಧವಿದೆ., ಸಾರ್ವಜನಿಕ ಸ್ಥಳದಲ್ಲಿ ಗಣೇಶ್ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ೨೦ ಜನಕ್ಕೆ ಸೀಮಿತವಾಗಿ ಆವರಣ ನಿರ್ಮಿಸುವುದು. ೨೦ಕ್ಕಿಂತ ಹೆಚ್ಚಿನ ಭಕ್ತರು,ಜನರು ಸೇರುವುದಕ್ಕೆ ಅವಕಾಶವಿಲ್ಲ, ಗಣೇಶ್ ಮೂರ್ತಿ ತುರುವಾಗ ಹಾಗೂ ವಿಸರ್ಜನೆ ವೇಳೆ ಮೆರವಣಿಗೆ,ಡಿಜೆ ಸೇರಿದಂತೆ ಯಾವುದೇ ರೀತಿಯ ಆಡಂಬರ, ಗದ್ದಲಕ್ಕೆ ಸಂಪೂರ್ಣ ನಿಷೇಧ ವಿಧಿಸಿ ಸರಕಾರ ರೂಪಿಸಿರುವ ಮಾರ್ಗಸೂಚಿಗಳನ್ವಯ ಉತ್ಸವ ಆಚರಿಸಬೇಕು, ಸರಕಾರದೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿರುವದು ಇಂದು ಅಗತ್ಯವಾಗಿದೆ.
ಏನೇ ಇರಲಿ ಗಣೇಶ ಉತ್ಸವಕ್ಕಿದ್ದ ಅಡಚಣೆಗಳನ್ನು ಸರಕಾರ ನಿವಾರಿಸಿ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಿದೆ. ಈ ಅವಕಾಶಗಳನ್ನು ಬಳಸಿಕೊಂಡು ಗಣೇಶ ಉತ್ಸವವನ್ನು ಸರಳ ಹಾಗೂ ಶಾಂತಿಯುತವಾಗಿ ಆಚರಿಸುವದು ಪ್ರತಿಯೊಬ್ಬರು ಜವಾಬ್ದಾರಿ. ಗಣೇಶ ಉತ್ಸವದ ಕಾಲಕ್ಕೆ ಗಣೇಶ ಉತ್ಸವ ಮಂಡಳಿಗಳು ಮಹಾಮಾರಿಯ ಕೋರೋನಾ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಸ್ಯಾನಿಟೈಸರ್ ಪ್ರತಿಯೊಂದು ಗಣೇಶ ಪ್ರತಿಷ್ಠಾಪನೆಯ ಸ್ಥಳದಲ್ಲಿಟ್ಟು ಜನತೆಗೆ ಸ್ವಚ್ಛತೆಯ ಅರಿವು ಮೂಡಿಸುವ ಜೊತೆಗೆ ಮಾಸ್ಕ ಧರಿಸಿ  ಸಾಮಾಜಿಕ ಅಂತರ ಕಾಪಾಡುವದು ಸೇರಿದಂತೆ ಪ್ರತಿಯೊಂದು ಮುನ್ನೆಚ್ಚರಿಕೆಗಳನ್ನು ಮಂಡಳಿಗಳು ತೆಗೆದುಕೊಳ್ಳಬೇಕು, ಅದರಂತೆ ಜನತೆಗೆ ತಿಳಿ ಹೇಳಬೇಕು. ಜನತೆಯು ಸಹ ಈ ಮುನ್ನೆಚ್ಚರಿಕೆಗಳನ್ನು ಅರಿತು ಉತ್ಸವ ಮಂಡಳಿಗಳೊಂದಿಗೆ ಕೈಜೋಡಿಸಿ ವಿಘ್ನ ನಿವಾರಕ ಶ್ರೀ ಗಣೇಶನ ಉತ್ಸವವನ್ನು ಭಕ್ತಿಯಿಂದ ಸರಳಯುತವಾಗಿ ಆಚರಿಸಿ ಮಹಾಮಾರಿಯ ಕೋರೋನಾ ನಿವಾರಣೆಯಾಗಲಿ, ಜಿಲ್ಲೆಯಲ್ಲಿ ಎದುರಾಗಿರುವ ಪ್ರವಾಹ ತಗ್ಗಲಿ, ರೈತ, ಸಾರ್ವಜನಿಕರು ಸುಖ, ಶಾಂತಿ ನೆಮ್ಮದಿಯಿಂದ ಬದುಕುವಂ ತಾಗಲಿ ಎಂದು  ಆ ವಿಘ್ನನಿವಾರಕ ಗಣೇಶನಲ್ಲಿ ಪ್ರಾರ್ಥಿಸೋಣ.
- ಸಂ.