ಗಲಭೆಯಿಂದ  ಸಾಧಿಸಿದ್ದು ಏನು.....?

ಗುಂಡೇಟು ತಗುಲಿರುವ ಹಲವರಲ್ಲಿ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ, ಅವರು ಮನೆಯಲ್ಲಿಯೇ ಅಡಗಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಪೋಲೀಸರು ಹುಡುಕಾಟ ನಡೆಸಿದ್ದಾರೆ. ಏನಿದು ಹುಚ್ಚಾಟ ? ಸಹಿಸಲಾಗದ ಮತಾಂಧತೆ.

ಗಲಭೆಯಿಂದ  ಸಾಧಿಸಿದ್ದು ಏನು.....?
ಬೆಂಗಳೂರು ಮಹಾನಗರದ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಧ್ವಂಸಗೊಂಡಿದೆ, ಪೋಲೀಸ ಠಾಣೆಗೆ ಧಕ್ಕೆಯಾಗಿದೆ. ಇಡೀ ಬೆಂಗಳೂರು ಬದುಕು ಸ್ವಾಸ್ಥ್ಯ ಕದಡಿ ಹೋಗಿದೆ. ಕಾರಣ ಇಷ್ಟೆ. ಅವಹೇಳನಕಾರಿ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು. ಪರಿಸ್ಥಿತಿ ಪ್ರಕ್ಷುಬ್ಧಗೊಂಡು ದುಷ್ಕರ್ಮಿಗಳು ಪುಂಡಾಟ ನಡೆಸಿದಾಗ ಪೋಲೀಸರ ಗುಂಡಿಗೆ ನೆತ್ತರು ಹರಿದಿದೆ. ಮೂವರು ಅಸುನೀಗಿದ್ದಾರೆ. ಸುಮಾರು ೪೦ ಕ್ಕೂ ಹೆಚ್ಚು ಜನ ಗಾಯ ಗೊಂಡಿದ್ದಾರೆ. ಗುಂಡೇಟು ತಗುಲಿರುವ ಹಲವರಲ್ಲಿ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ, ಅವರು ಮನೆಯಲ್ಲಿಯೇ ಅಡಗಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಪೋಲೀಸರು ಹುಡುಕಾಟ ನಡೆಸಿದ್ದಾರೆ. ಏನಿದು ಹುಚ್ಚಾಟ ? ಸಹಿಸಲಾಗದ ಮತಾಂಧತೆ.
ಧರ್ಮಿಯರ ಮಧ್ಯೆ ಅವಹೇಳನ ಮಾಡುವ ಕುಮ್ಮಕ್ಕು ಈ ದೇಶದ ನೆಲದಲ್ಲಿ ಮೊದಲಿನಿಂದಲೂ ನಡೆಯುತ್ತಲೇ ಇದೆ. ಆದರೆ ಒಂದು ಧರ್ಮವನ್ನು ಟೀಕಿಸಿದಾಗ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುವವರು ಇನ್ನೊಂದು ಧರ್ಮಕ್ಕೆ ಕುಂದು ಬಂದಾಗ ಮಾತ್ರ ಜಾತ್ಯಾತೀತ ಶಕ್ತಿಗಳು ಮೌನವಾಗಿರುವದು ಜಾತ್ಯಾತೀತ ಭಾರತದ ದುರಂತ. ಸಾಮಾಜಿಕ ಜಾಲತಾಣದಲ್ಲಿ ದೇವರ ಅವಹೇಳನ ನಡೆಯುತ್ತಲೇ ಇದೆ. ಆದರೆ ಅದನ್ನು ಮಾತ್ರ ಸಹಿಸಿಕೊಳ್ಳಲಾಗುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದಮನ ಮಾಡಲಾಗುತ್ತಿದೆ. ಆದರೆ ಇದಕ್ಕೆ ಮಾತ್ರ ಯಾವೊಬ್ಬ ಬುದ್ದಿ ಜೀವಿಯೂ, ಜಾತ್ಯಾತೀತವಾದಿಗಳು ಬಾಯಿ ಬಿಟ್ಟಿಲ್ಲ, ಘಟನೆಯನ್ನು ಖಂಡಿಸಿಲ್ಲ, ಮತಾಂಧತೆಯ ಕ್ರೌರ್‍ಯವನ್ನು ವಿರೋಧಿಸಿಲ್ಲ, ಇದೆಂತಹ ದುರಂತ. 
ಘಟನೆ ಪೂರ್ವ ನಿಯೋಜಿತವಾಗಿ ನಡೆದಿದೆ ಎಂಬ ಮಾಹಿತಿ ಇದೆ. ಘಟನೆ ನಡೆದ ೩ ಗಂಟೆಗಳ ಕಾಲ ಪೋಲೀಸರು ಸ್ಥಳಕ್ಕೆ ಬಂದಿಲ್ಲ ಎಂಬ ಆಕೊಶ ಇದೆ. ಆದರೆ ಇದಲೆಕ್ಕಿಂತಲೂ ಭಿನ್ನವಾಗಿ ಪೋಲೀಸರನ್ನು ಘಟನಾ ಸ್ಥಳಕ್ಕೆ ಬರದಂತೆ ತಡೆಯುವ ಪ್ರಯತ್ನ ನಡೆದಿದೆ. ಪೋಲೀಸರನೆ ಗುರಿಯಾಗಿಸಿ ಪುಂಡರು, ಮತಾಂಧರು ಅಟ್ಟಹಾಸ ಮೆರೆದಿದ್ದಾರೆ, ಇವರನ್ನು ಇಷ್ಟೆಕ್ಕೆ ಬಿಡಬಾರದು, ಆಗಿರುವ ಹಾನಿಯನ್ನು ಇವರಿಂದಲೇ ಸಂಗ್ರಹಿಸುವ ಪುಂಡಗಂದಾಯ ವಿಧಿಸಬೇಕು, ಕೋಮು ಗಲಭೆಗಳಲ್ಲಿ ಭಾಗವಹಿಸುವ ಯಾವದೇ ಧರ್ಮ, ಯಾವದೇ ಸಮಾಜ, ಯಾವದೇ ಜಾತಿಯ ವ್ಯಕ್ತಿಯನ್ನು ಆತನಿಗೆ ನೀಡುವ ಸರಕಾರಿ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಆತನ ಮತಾಧಿಕಾರವನ್ನು ನಿಲ್ಲಿಸುವ ಕಠಿಣ ಕ್ರಮ ಜಾರಿಯಾಗದ ಹೊರತು ಇಂತಹ ಅಟ್ಟಹಾಸವನ್ನು ನಿಲ್ಲಿಸಲು ಸಾಧ್ಯವಿಲ್ಲ.
ಕೋರೋನಾ ಅಟ್ಟಹಾಸದಲ್ಲಿ ಜನ ನಲಗುತ್ತಿರುವಾಗ ನಡೆದಿರುವ ದುಷ್ಕೃತ್ಯವನ್ನು ನಿಯಂತ್ರಿಸುವಲ್ಲಿ ಸರಕಾರ  ವಿಫಲವಾಗಿದೆ ಎಂಬ ಅನುಮಾನ ಕಾಡುತ್ತಿದೆ. ಗುಪ್ತಚರ ದಳದ ವೈಫಲ್ಯದ ಬಗ್ಗೆ ಅನುಮಾನಗಳು ಹುಟ್ಟಿವೆ. ದುಷ್ಕರ್ಮಿಗಳನ್ನು ಮಟ್ಟ ಹಾಕಲು ಸರಕಾರ ಅಸಹಾಯಕವಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಮನೆ ಧ್ವಂಸಗೊಂಡಿದ್ದು ಕಾಂಗ್ರೆಸ್ ಪPದ ಶಾಸಕರದ್ದು. ಅವಹೇಳನಕಾರಿ ಪೋಸ್ಟ ಮಾಡಿದ್ದು ಅವರ ಸಂಬಂಧಿಕರು, ಆದರೆ ಅದಕ್ಕಾಗಿ ವ್ಯಥೆಪಟ್ಟಿದ್ದು ಸಮಾಜ, ಹರಸಾಹಸ ಪಟ್ಟಿದ್ದು ಪೋಲೀಸ ಇಲಾಖೆ, ಬೆಂಗಳೂರು ಮಹಾನಗರದ ನಿರ್ಧಿಷ್ಟ ವಲಯದಲ್ಲಿ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ. ಪ್ರಭಾವಿ ರಾಜಕಾರಣಿಗಳು ಅವರ ಬೆಂಗಾವಲಿಗೆ ನಿಲ್ಲುತ್ತಿದ್ದಾರೆ ಎಂಬ ಅನುಮಾನ, ಆರೋಪ ಇಂದು ನಿನ್ನೆಯದಲ್ಲ. ಸರಕಾರ ಪೋಲೀಸರಿಗೆ ಸಾಮಾಜಿಕ ಕಳಕಳಿ ಇದ್ದರೆ ಕಳೆದ ಎರಡು ಮೂರು ತಿಂಗಳುಗಳಿಂದ ಬೆಂಗಳೂರು ಸ್ವಾಸ್ಥ್ಯವನ್ನು ಕದಡುತ್ತಿರುವ ಪುಂಡರನ್ನು ಮಟ್ಟ ಹಾಕಬೇಕು, ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಮೂಡಿಸಬೇಕು. ರಾಜ್ಯದ ಎಲ್ಲ ರಾಜಕೀಯ ಪPಗಳು, ಬುದ್ಧಿಜೀವಿಗಳು, ಸಾಮಾಜಿಕ ಚಿಂತಕರು ಸರಕಾರದ ಜೊತೆ ಕೈಜೋಡಿಸಬೇಕು. ಬೆಂಗಳೂರಿನಲ್ಲಿ ಶಾಂತಿ, ಸಹನೆ, ಸಹಬಾಳ್ವೆ ನೆಲೆಗೊಳ್ಳಲು ಪ್ರತಿಯೊಬ್ಬರು ಸಹಕರಿಸಬೇಕು.
- ಸಂ.