ಅತಿರೇಕಕ್ಕೆ ತಿರುಗಿದ ತಮಾಷೆ ಸ್ನೇಹಿತನ ಸಾವಿನಲ್ಲಿ ಅಂತ್ಯ..!

ಅತಿರೇಕಕ್ಕೆ ತಿರುಗಿದ ತಮಾಷೆ ಸ್ನೇಹಿತನ ಸಾವಿನಲ್ಲಿ ಅಂತ್ಯ..!

ನಾಡನುಡಿ ನ್ಯೂಸ್ 
ಬಾಗಲಕೋಟೆ:
ಸ್ನೇಹಿತರ ನಡುವಿನ ತಮಾಷೆ ಅತಿರೇಕಕ್ಕೆ ತಿರುಗಿ ಗೆಳೆಯನ ಸಾವಿನಲ್ಲಿ  ಅಂತ್ಯವಾಗಿರುವ ದಾರುಣ ಘಟನೆ ರಬಕವಿ- ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.

ಆಸಂಗಿ ಗ್ರಾಮದ  ಸದಾಶಿವ ಅಣ್ಣಪ್ಪ ನಾವಿ(೧೯) ಗೆ ಸೇರಿದ‌ ಮಳಿಗೆಯಲ್ಲಿ ಗೆಳೆಯರು  ಹರಟೆ ಹೊಡೆಯುತ್ತಿದ್ದರು.ಒಬ್ಬರಿಗೊಬ್ಬರು ತಮಾಷೆ ಆಡೋದು, ಕುಚೇಷ್ಟೆ ಮಾಡೋದು ಸಹಜವಾಗಿತ್ತು. ಆದರೆ ಗುರುವಾರ ಇದು ಅತಿರೇಕಕ್ಕೆ ತಿರುಗಿ ಸ್ನೇತಿನ ಕೊಲೆಯಲ್ಲಿ ಅಂತ್ಯವಾಗಿದೆ.

ಸಾಗರ ಸೀನಪ್ಪ ಅವಟಿ(೨೩) ಕೊಲೆಯಾದ ದುರ್ದೈವಿ. ಸದಾಶಿವ ನಾವಿ ತಮಾಷೆ ಮಾಡೋವಾಗ ಕತ್ತರಿಯನ್ನು ಸ್ನೇಹಿತ ಸಾಗರನ ಎದೆಗೆ ತಿವಿದಿದ್ದಾನೆ. ಆಗ ಗಂಭೀರ ಗಾಯವಾಗಿದ್ದು, ಕೂಡಲೇ ರಬಕವಿ-ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ   ಚಿಕಿತ್ಸೆ ಫಲಕಾರಿಯಾಗದೆ ಸಾಗರ ಮೃತಪಟ್ಟಿದ್ದಾನೆ ಎಂದು‌ ತಿಳಿದು ಬಂದಿದೆ.ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.