ತಿರುಪತಿ ಲಡ್ಡು ಪಡೆಯೋದಕ್ಕೂ ಆಧಾರ ಕಡ್ಡಾಯ
ತಿರುಮಲ: ನೀವು ತಿರುಪತಿ ವೆಂಕಪ್ಪನ ದರ್ಶನ ಪಡೆದು ಲಡ್ಡು ಪಡೆಯಬೇಕಾದರೂ ಇನ್ನು ಮುಂದೆ ಆಧಾರ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ.
ಹೌದು ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಇಂಥದೊಂದು ನಿರ್ಣಯಕ್ಕೆ ಮುಂದಾಗಿದೆ.
ಒಂದು ಬಾರಿ ಆಧಾರ ತೋರಿಸಿದರೆ ಎರಡು ಲಡ್ಡು ನೀಡಲಾಗುತ್ತದೆ. ಈ ಮೊದಲು ಒಬ್ಬರಿಗೆ ತಿಂಗಳಿಗೆ ಎರಡೇ ಲಡ್ಡು ಎಂಬ ವದಂತಿ ಹರಡಿತ್ತು. ಅದಕ್ಕೆ ಬ್ರೇಕ್ ಹಾಕಿರುವ ದೇವಸ್ಥಾನ ಮಂಡಳಿ ಒಂದು ಬಾರಿ ಆಧಾರ ತೋರಿಸಿದರೆ ಎರಡು ಲಡ್ಡು ನೀಡುವುದಾಗಿ ಸ್ಪಷ್ಟಪಡಿಸಿದೆ.
ಸುದ್ದಿಗಳಿಗಾಗಿ ನಾಡನುಡಿ ವಾಟ್ಸ ಕಮ್ಯೂನಿಟಿ ಸೇರಿ