ಇನ್ನು ಮುಂದೆ ಇರಲ್ಲ "ಜುಮ್ಮಾ ಬ್ರೇಕ್"

ಇನ್ನು ಮುಂದೆ ಇರಲ್ಲ "ಜುಮ್ಮಾ ಬ್ರೇಕ್"

ಅಸ್ಸಾಂ:ಈವರೆಗೆ ಅಸ್ಸಾಮ ವಿಧಾನಸಭೆಯಲ್ಲಿದ್ದ ಜುಮ್ಮಾ ಬ್ರೇಕ್ ಯನ್ನು ರದ್ದುಪಡಿಸಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.

ಅಸ್ಸಾಂ ವಿಧಾನಸಭೆಯಲ್ಲಿ‌ ಶುಕ್ರವಾರದಂದು ಶಾಸಕರು‌ ಹಾಗೂ ಸಿಬ್ಬಂದಿಗೆ ಮಧ್ಯಾಹ್ನ ೧೨ ರಿಂದ ೨ ಗಂಟೆಯವರೆಗೆ ಜುಮ್ಮಾ ಬ್ರೇಕ್ ನೀಡಲಾಗುತಿತ್ತು.ಅದನ್ನು ರದ್ದುಪಡಿಸಿ  ಅಲ್ಲಿನ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ವಸಾಹತುಶಾಹಿ ಕಾಲದ ಅಭ್ಯಾಸಗಳನ್ನು ಅಂತ್ಯಗೊಳಿಸುವುದಕ್ಕಾಗಿ ಸದನ ನಿಯಮಾವಳಿ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರವನ್ನು ಅನುಮೋದಿಸಿದೆ ಎಂದು ವರದಿ ಆಗಿದೆ.