31 ಅಭ್ಯರ್ಥಿಗಳಿಂದ 42 ನಾಮಪತ್ರ ಸಲ್ಲಿಕೆ
ಬಾಗಲಕೋಟೆ: ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಬುಧವಾರ 31 ಅಭ್ಯರ್ಥಿಗಳಿಂದ ಒಟ್ಟು 42 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದ್ದಾರೆ.
ಮುಧೋಳ ಕ್ಷೇತ್ರದಿಂದ 3, ತೇರದಾಳ ಕ್ಷೇತ್ರದಿಂದ 8, ಜಮಖಂಡಿ ಕ್ಷೇತ್ರದಿಂದ 3, ಬೀಳಗಿ ಕ್ಷೇತ್ರದಿಂದ 9, ಬಾದಾಮಿ ಕ್ಷೇತ್ರದಿಂದ 8, ಬಾಗಲಕೋಟೆ ಕ್ಷೇತ್ರದಿಂದ 7 ಹಾಗೂ ಹುನಗುಂದ ಕ್ಷೇತ್ರದಿಂದ 4 ನಾಮಪತ್ರಗಳು ಸೇರಿ ಒಟ್ಟು 42 ನಾಮಪತ್ರಗಳು ಸಲ್ಲಿಕೆಯಾಗಿವೆ.
ಜಮಖಂಡಿ ಮತಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಹುಸೇನಬಿ ಝರೆ 1, ಬಿಜೆಪಿ ಪಕ್ಷದಿಂದ ಜಗದೀಶ ಗುಡಗುಂಟಿ 1, ಪಕ್ಷೇತರದಿಂದ ಶ್ರೀಕಾಂತ ಮುಧೋಳೆ 1 ನಾಮಪತ್ರ ಸಲ್ಲಿಸಿದ್ದಾರೆ. ಮುಧೋಳ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆರ್.ಬಿ.ತಿಮ್ಮಾಪೂರ 2, ಆಮ್ ಆದ್ಮಿ ಪಕ್ಷದಿಂದ ಗಣೇಶ ಪವಾರ 1 ನಾಮಪತ್ರ ಸಲ್ಲಿಸಿದ್ದಾರೆ. ತೇರದಾಳ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸಿದ್ದಪ್ಪ ರಾಮಪ್ಪ ಕೊಣ್ಣೂರ 1, ಪಕ್ಷೇತರದಿಂದ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಕಿರಣಕುಮಾರ ದೇವಲ ದೇಸಾಯಿ, ಸಂತೋಷ ಬಸಪ್ಪ ಹನಗಂಡಿ ತಲಾ 1, ಬಿಜೆಪಿ ಪಕ್ಷದಿಂದ ಸಿದ್ದಪ್ಪ ಕಲ್ಲಪ್ಪ ಸವದಿ 2, ಆಮ್ ಆದ್ಮಿ ಪಕ್ಷದಿಂದ ಅರ್ಜುನ ಹಲಗಿಗೌಡರ, ಎಸ್‍ಡಿಪಿಐ ಪಕ್ಷದಿಂದ ಪರಶುರಾಮ ಶಮಸುದ್ದ ಮೇತ್ರಿ 1 ನಾಮಪತ್ರ ಸಲ್ಲಿಸಿದ್ದಾರೆ.
ಬೀಳಗಿ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಜೆ.ಟಿ.ಪಾಟೀಲ 4, ಉತ್ತಮ ಪ್ರಜಾಕೀಯ ಪಕ್ಷದಿಂದ ನರಸಿಂಹ ಮಂಜುನಾಥ ರಾಯ್ಕರ, ಪಕ್ಷೇತರದಿಂದ ನಿಂಗನಗೌಡ ಚಂದ್ರಶೇಖರಗೌಡ ಪಾಟೀಲ 1, ಆಮ್ ಆದ್ಮಿ ಪಕ್ಷದಿಂದ ಮುತ್ತಪ್ಪ ಕೋಮಾರ 2, ಕರ್ನಾಟಕ ಜನತಾ ಪಕ್ಷದಿಂದ ಭೀಮಪ್ಪ ಮಾದರ 1 ನಾಮಪತ್ರ ಸಲ್ಲಿಸಿದ್ದಾರೆ. ಬಾದಾಮಿ ಕ್ಷೇತ್ರದಿಂದ ಪಕ್ಷೇತರದಿಂದ ಭೀಮಪ್ಪ ತಳವಾರ 1, ಜೆಡಿಎಸ್ ಪಕ್ಷದಿಂದ ಹನಮಂತ ಮಾವಿನಮರದ 4, ಬಿಜೆಪಿ ಪಕ್ಷದಿಂದ ಶಾಂತಗೌಡ ಪಾಟೀಲ 2, ಪಕ್ಷೇತರದಿಂದ ಹನಮಪ್ಪ ಕಾಟನ್ನವರ 1 ನಾಮಪತ್ರ ಸಲ್ಲಿಸಿದ್ದಾರೆ.
ಬಾಗಲಕೋಟೆ ಮತಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ವೀರಣ್ಣ ಚರಂತಿಮಠ 2, ಆಮ್ ಆದ್ಮಿ ಪಕ್ಷದಿಂದ ರೂಪಾ ಬದ್ನೂರ, ರಮೇಶ ಬದ್ಮೂರ ತಲಾ 1, ಜೆಡಿಎಸ್ ಪಕ್ಷದಿಂದ ದೇವರಾಜ ಪಾಟೀಲ 1, ಪಕ್ಷೇತರದಿಂದ ಮಲ್ಲಿಕಾರ್ಜುನ ಚರಂತಿಮಠ, ಪಕ್ಷೇತರದಿಂದ ವೀರಭದ್ರಯ್ಯ ಹಿರೇಮಠ 1 ನಾಮಪತ್ರ ಸಲ್ಲಿಸಿದ್ದಾರೆ. ಹುನಗುಂದ ಮತಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ನಾಗರಾಜ ಹೊಂಗಲ, ಪಕ್ಷೇತರದಿಂದ ಚರಲಿಂಗಪ್ಪ ಅಕ್ಕಿ ತಲಾ 1, ಜೆಡಿಎಸ್ ಪಕ್ಷದಿಂದ ಶಿವಪ್ಪ ಬೋಳಿ 1, ಕಾಂಗ್ರೇಸ್ ಪಕ್ಷದಿಂದ ವಿಜಯಾನಂದ ಕಾಶಪ್ಪನವರ 1 ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.