ಐಹೊಳೆ ಬಳಿ ಕಾರು ಢಿಕ್ಕಿ- ಇಬ್ಬರು ವಿದ್ಯಾರ್ಥಿಗಳು ಸಾವು..!

ಐಹೊಳೆ ಬಳಿ ಕಾರು ಢಿಕ್ಕಿ- ಇಬ್ಬರು ವಿದ್ಯಾರ್ಥಿಗಳು  ಸಾವು..!

ನಾಡನುಡಿ ನ್ಯೂಸ್ 
ಬಾಗಲಕೋಟೆ:
 ಐಹೊಳೆ ಗ್ರಾಮದ ಬಳಿ ಕಾರು ಢಿಕ್ಕಿ ಸಂಭವಿಸಿ ಇಬ್ಬರು ಶಾಲಾ ವಿದ್ಯಾರ್ಥಿನಿಯರು  ಮೃತಪಟ್ಟಿದ್ದಾಾರೆ.

(ಗಾಯಗೊಂಡಿರುವ ವಿದ್ಯಾರ್ಥಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕರೆ ತಂದಿರುವುದು)

ಚಿಲ್ಲಾಪುರ ಗ್ರಾಮದ ಅಂಜಲಿ ಸೂಡಿ(೧೫), ನೇತ್ರಾವತಿ ರಗಟಿ (೧೫)ಮೃತ ದುರ್ದೈವಿಗಳು ಎಂದು ತಿಳಿದು ಬಂದಿದ್ದು, ಐಹೊಳೆಯ ವಿಜಯಮಹಾಂತೇಶ ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದರು. ಶಾಲೆಯಿಂದ ಮನೆಗೆ ಹೊರಟ ಸಂದರ್ಭದಲ್ಲಿ ಕಾರು ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದು,ಘಟನೆಯಲ್ಲಿ ಗಾಯಗೊಂಡ ಮೂವರು ವಿದ್ಯಾರ್ಥಿಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಾದಾಮಿ ಮೂಲದ ಸಂತೋಷ ಅಮರಿ ಎಂಬುವವರ ಕಾರು ಢಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿಯಿದೆ.

ಘಟನಾ ಸ್ಥಳಕ್ಕೆ ಐಹೊಳೆ ಪ್ರವಾಸದಲ್ಲಿದ್ದ ಸಚಿವ ಮುನಿರತ್ನ ಭೇಟಿ ನೀಡಿದ್ದು, ಮೃತ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಸಾಂತ್ವಾನ‌ ಹೇಳಿದ್ದಾರೆ.