ಅಸಂಧಾನಿಕ ಶಬ್ದಗಳಿಂದಲೇ ಯತ್ನಾಳ ವಿರುದ್ಧ ಗುಡುಗಿದ ಕಾಶಪ್ಪನವರ 

ಅಸಂಧಾನಿಕ ಶಬ್ದಗಳಿಂದಲೇ ಯತ್ನಾಳ ವಿರುದ್ಧ ಗುಡುಗಿದ ಕಾಶಪ್ಪನವರ 
ಬಾಗಲಕೋಟೆ:ಟಿಪ್ಪು ಸುಲ್ತಾನ್ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಳಸಿದ್ದ ಎಲ್ಲ ಅಸಂವಿಧಾನಗಳನ್ನು ಬಳಸಿ ಯತ್ನಾಳ ವಿರುದ್ಧ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಗುಡುಗಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಯತ್ನಾಳ ಹುಟ್ಟಿನ ಬಗ್ಗೆಯೂ ಕುಟುಕಿದ್ದಾರೆ.
ನಗರದಲ್ಲಿ ತಮ್ಮನ್ನು ಭುಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ, ಟಿಪ್ಪು ಸುಲ್ತಾನ ಅಪ್ಪಟ ದೇಶಭಕ್ತ, ಟಿಪ್ಪು ಸುಲ್ತಾನ ಯಾರಿಗೆ ಹುಟ್ಟಿದ್ದು ಎಂದು ಕೇಳಿದವರು ಇವರು ಯಾರಿಗೆ ಹುಟ್ಟಿದ್ದಾರೆ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಯತ್ನಾಳ ಬಳಸಿದಷ್ಟೇ ಅಸಂವಿಧಾನ ಪದಗಳನ್ನು ಬಳಸಿ ಕಾಶಪ್ಪನವರ ನಾಲಿಗೆ ಹರಿಬಿಟ್ಟರು.
ಪ್ಯಾಲೆಸ್ತೈನ್ ಧ್ವಜ ಹಾರಾಟ ಪ್ರಕರಣದಲ್ಲಿ ಸರ್ಕಾರ, ಸಿಎಂ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಅದಕ್ಕೆ ಸರ್ಕಾರ ಏನು ಮಾಡಬೇಕು. ಇವರ ಅವಧಿಯಲ್ಲಿ ಇಂಥದೇನೂ ನಡೆದಿರಲಿಲ್ಲವೇ ಎಂದು ಪ್ರಶ್ನಿಸಿದರು.
ಧರ್ಮ ಆಧಾರಿತ ರಾಜಕಾರಣ ಬಿಡಬೇಕು.ಪೊಲೀಸರು ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಯತ್ತಾರೆ. ಅಲ್ಪಸಂಖ್ಯಾತರು ಭಾರತ ದೇಶದ ಒಂದು ಸಮುದಾಯ ಅಲ್ಲವೇ , ಅವರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿಲ್ಲವೇ..? ಬಿಜೆಪಿ ಇಂಡಿಯಾ ಗೇಟ್ ಮೇಲೆ ಹೆಸರುಗಳನ್ನು ನೋಡಲಿ,ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಯೋಧರಲ್ಲಿ ಅಲ್ಪಸಂಖ್ಯಾತರೇ ಜಾಸ್ತಿ ಜನ ಇದ್ದಾರೆ ಎಂದರು.
ಸ್ವಾಮೀಜಿ ರಾಜಕಾರಣ ಮಾಡೋದನ್ನ ನಿಲ್ಲಿಸಲಿ..!
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ನಮ್ಮ ಸಮಾಜದ ಗುರುಗಳಾಗಿ ಅವರು ಅವರು ರಾಜಕಾರಣ ಮಾಡುವುದನ್ನು ಬಿಟ್ಟು, ರಾಜಕಾರಣಿಗಳನ್ನ ಬೆನ್ನು ಹತ್ತುವಯದನ್ನು ಬಿಟ್ಟು ಮಠದಲ್ಲಿ ಇರಲಿ ಎಂದು ಕುಟುಕಿದರು.
ಮೀಸಲಾತಿ ಕೊಡೊಕೆ ಪ್ರಮುಖ ಪಾತ್ರ ವಹಿಸಿದವನಣೆ ನಾನು, ಅದರ ಬಗ್ಗೆ ಸತ್ಯಾಸತ್ಯತೆ ಜನತೆಗೆ ಗೊತ್ತಾಗಬೇಕು. ಸುಮ್ಮನೆ ಸಿಎಂ ಮೇಲೆ ಆರೋಪ ಮಾಡಬಾರದು. ಸಿಎಂ ಸಿದ್ದರಾಮಯ್ಯ ಹೆದರಿಸಿದ್ದಾರೆ ಅಂತಾರೆ ಅವರೆಲ್ಲಿ ಹೆದರಿಸಿದ್ದಾರೆ ಸುಪ್ರೀಂ ಕೋರ್ಟ್ ನಲ್ಕು ತಡೆಯಾಜ್ಞೆ ಇದೆ. ಅದು ತೆರವು ಆಗುವವರೆಗೆ ನಿರ್ಣಯ ಸಾಧ್ಯ ಇಲ್ಲ ಎಂದು ಸಿಎಂ ಹೇಳಿದ್ದಾರೆ ಎಂದರು.
ಸುಮ್ಮನೇ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿ ಬೊಮ್ಮಾಯಿ ಗೌರವ ಕೊಟ್ಟರು ಅಂತಾರಲ್ಲ ನಮ್ಮ ಸಮಾಜಕ್ಕೆ ೨ಡಿ, ೨ಸಿ ಸಿಗ್ತಾ ಇದೆಯಾ ಆ ಸ್ವಾಮೀಜಿಗೆ ಕೇಳಿ.ಯತ್ನಾಳ ಜತೆಗೆ ಸೇರಿ ಸ್ವಾಮೀಜಿ ಅದನ್ನೇ ಒಪ್ಪಿದ್ದರು ಆದರೆ ನಾವು ಅದನ್ನ ಒಪ್ಪಿರಲಿಲ್ಲ. ಸ್ವಾಮೀಜಿ ಈ ಥರ ಮಾತಾಡೋದನ್ನ ನಿಲ್ಲಿಸಿ ಸಮಾಜ ಕಟ್ಟಲಿ ಎಂದು ಸಲಹೆ ಮಾಡಿದರು.