ಬಾಗಲಕೋಟೆ:
ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಲೋಕಾಪುರ-ಧಾರವಾಡ ಹೊಸ ಮಾರ್ಗ ಘೋಷಣೆಗೆ ಈಗ ಹೋರಾಟದ ಕಹಳೆ ಮೊಳಗಿದೆ.
೨೦೧೬-೧೭ರಲ್ಲಿ ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಸವದತ್ತಿಯಿಂದ ಧಾರವಾಡ ಸಂಪರ್ಕ ಕಲ್ಪಿಸಲು ಯೋಜಿಸಲಾಗಿತ್ತು. ಆದರೆ ೨೦೧೯ರಲ್ಲಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ಈಗ ಕುಡುಚಿ ಮಾರ್ಗದ ಸಲುವಾಗಿ ಲೋಕಾಪುರದವರೆಗೆ ರೈಲು ಮಾರ್ಗ ನಿರ್ಮಾಣವಾಗಿರುವುದರಿಂದ ಈ ಹೊಸ ಮಾರ್ಗಕ್ಕೂ ಒತ್ತು ಸಿಗಬೇಕೆಂಬ ಕೂಗು ಶುರುವಾಗಿ ಅದಕ್ಕಾಗಿ ಹೋರಾಟಗಾರ ಕುತ್ಬುದ್ಧಿನ್ ಖಾಜಿ ನೇತೃತ್ವದಲ್ಲಿ ರೈಲ್ವೆ ಹೋರಾಟ ಸಮಿತಿ ಹೋರಾಟಕ್ಕೆ ಅಣಿಯಾಗಿದೆ. ರವಿವಾರ ಬಾಗಲಕೋಟೆಯಲ್ಲಿರುವ ಶ್ರೀಚರಂತಿಮಠದಿAದ ಹೋರಾಟಕ್ಕೆ ಚಾಲನೆ ಸಿಕ್ಕಿದ್ದು, ಮುಂದಿನ ರೂಪುರೇಶೆಗಳ ಬಗ್ಗೆ ಚರ್ಚಿಸಲಾಗಿದೆ
ಉತ್ತರ ಕರ್ನಾಟಕದಲ್ಲಿ ಸವದತ್ತಿ ಯಲ್ಲಮ್ಮದೇವಿಗೆ ಅಪಾರ ಸಂಖ್ಯೆ ಭಕ್ತಗಣವಿದ್ದು, ಧಾರವಾಡದಲ್ಲಿ ಉಚ್ಛನ್ಯಾಯಾಲಯವೂ ಇರುವುದರಿಂದ ಈ ಭಾಗದ ಜನರ ಓಡಾಟಕ್ಕೆ ಅನುಕೂಲವಾಗಲಿದೆ ಅಲ್ಲದೇ ವಾಣಿಜ್ಯೋದ್ಯಮ ಬೆಳವಣಿಗೆಗೂ ಒತ್ತು ದೊರೆಯಲಿದೆ ಅದಕ್ಕಾಗಿ ಹೊಸ ರೈಲು ಮಾರ್ಗ ದೊರೆಯಬೇಕೆಂಬುದು ಈ ಭಾಗದ ಜನರ ಆಶಯವಾಗಿದೆ.
ಕುಡುಚಿ ಮಾರ್ಗಕ್ಕೆ ಬಿಡದ ಗ್ರಹಣ:
ಬಾಗಲಕೋಟೆ-ಕುಡುಚಿ ರೈಲು ಮಾರ್ಗಕ್ಕೆ ೨೦೧೦ರಲ್ಲೆ ಅನುಮೋದನೆ ಸಿಕ್ಕಿತ್ತು. ೨೦೧೦ರಲ್ಲಿ ೮೧೬ ಕೋಟಿ ರೂ.ಗಳ ಅನುದಾನದೊಂದಿಗೆ ಕಾಮಗಾರಿ ಶುರುವಾಯಿತು. ಆದರೆ ಭೂಸ್ವಾಧೀನದಲ್ಲಿ ವಿಳಂಬ ಸೇರಿದಂತೆ ನಾನಾ ಕಾರಣಗಳಿಂದಾಗಿ ಯೋಜನೆ ಆರಂಭಗೊAಡು ಹನ್ನೇರಡು ವರ್ಷಗೊಂಡರೂ ಕಾಮಗಾರಿ ಪೂರ್ಣಗೊಂಡಿಲ್ಲ. ಪರಿಣಾಮ ಭೂಸ್ವಾಧೀನವೂ ಸೇರಿ ಕಾಮಗಾರಿ ವೆಚ್ಚ ೪ ಸಾವಿರ ಕೋಟಿ ರೂ. ದಾಟಿದೆ ಎಂದು ಅಂದಾಜಿಸಲಾಗಿದೆ.
ಈ ಮಾರ್ಗದ ಒಟ್ಟು ೧೪೧ ಕಿ.ಮೀ. ಪೈಕಿ ೪೧ ಕಿಲೋಮೀಟರ್‌ವರೆಗೆ ಮಾತ್ರವೇ ಕಾಮಗಾರಿ ಪೂರ್ಣಗೊಂಡಿದ್ದು, ೬೦ ಕಿ.ಮೀ. ಕಾಮಗಾರಿ ಚಾಲ್ತಿಯಲ್ಲಿದೆ. ೪೦ ಕಿ.ಮೀ. ಕೆಲಸ ಇನ್ನೂ ಶುರುವಾಗಿಲ್ಲ. ೨೦೧೨ರಲ್ಲಿ ಕಾಮಗಾರಿ ಆರಂಭಗೊAಡಾಗ ೨೦೧೭ರಲ್ಲಿ ಪೂರ್ಣಗೊಳಿಸುವ ಗುರಿಯಿತ್ತು. ಆದರೆ ಆದರೆ ಆಗ ಆಗಲಿಲ್ಲ. ನಂತರ ೨೦೧೯,೨೦೨೨ರಲ್ಲಿ ಪೂರ್ಣಗೊಳಿಸುವುದಾಗಿ ಆಳುವ ಸರ್ಕಾರಗಳು ಹೇಳುತ್ತಲೇ ಬಂದಿದ್ದವು, ಆಗಲೂ ಆಗದಿದ್ದಾಗ ೨೦೨೪ರಲ್ಲಿ ನಿಶ್ಚಿತ ಎಂಬ ಮಾತಿತ್ತು. ಈಗ ಅದು ಕೂಡ ಹುಸಿಯಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ಪೂರ್ಣಗೊಂಡರೆ ಬೆಳಗಾವಿ-ಬಾಗಲಕೋಟೆ ಜನರ ಪುಣ್ಯ ಎನ್ನಬಹುದು.
ಈಗ ಲೋಕಾಪುರದವರೆಗೆ ಕಾಮಗಾರಿ ಪೂರ್ಣಗೊಂಡಿರುವುದರಿAದ ಈ ಹಿಂದೆ ಚರ್ಚೆಯಲ್ಲಿದ್ದು, ನೆನೆಗುದಿಗೆ ಬಿದ್ದಿರುವ ಲೋಕಾಪುರ-ಧಾರವಾಡ ಹೊಸ ಮಾರ್ಗಕ್ಕೆ ಜೀವ ತುಂಬಬೇಕೆAಬುದು ಇಲ್ಲಿನ ಹೋರಾಟಗಾರರ ಚಿಂತನೆ ಆಗಿದೆ. ಅದಕ್ಕಾಗಿ ಮೊದಲ ಹಂತದಲ್ಲಿ ಜಾಗೃತಿಗೆ ಮುಂದಾಗಲು ನಿರ್ಧರಿಸಿದ್ದು, ಬಾಗಲಕೋಟೆ, ಲೋಕಾಪುರ, ರಾಮದುರ್ಗ, ಸವದತ್ತಿ, ಬಟಕುರ್ಕಿ, ಶಿರಸಂಗಿ, ಧಾರವಾಡಗಳಲ್ಲಿ ಜನಜಾಗೃತಿ ಸಭೆಗಳನ್ನು ಮೊದಲ ಹಂತದಲ್ಲಿ ಮಾಡಿ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಯೋಚನೆ ಇದೆ. ಅದಾದ ನಂತರ ಕೇಂದ್ರ ಸರ್ಕಾರವನ್ನು ಗಮನಸೆಳೆಯುವ ನಿಟ್ಟಿನಲ್ಲಿ ನಾನಾ ರೀತಿಯ ಹೋರಾಟಗಳನ್ನು ರೂಪಿಸಲಾಗುತ್ತದೆ ಎಂದು ಹೋರಾಟಗಾರ ಕುತ್ಬುದ್ಧಿನ್ ಖಾಜಿ ತಿಳಿಸಿದ್ದಾರೆ.