ದರೋಡೆಗೆ ಹೊರಟ್ಟಿದ್ದ ಕಳ್ಳರು ಅಂದರ್ 

ದರೋಡೆಗೆ ಹೊರಟ್ಟಿದ್ದ ಕಳ್ಳರು ಅಂದರ್ 
ಬಾಗಲಕೋಟೆ:
ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕ್‌ಗಳಿಗೆ ಕನ್ನ ಹಾಕುತ್ತಿದ್ದ ಖತರನಾಕ್ ದರೋಡೆಕೋರರ ಗ್ಯಾಂಗ್ ಕೊನೆಗೂ ಪೊಲೀಸರ ಅತಿಥಯಾಗಿದೆ. 
ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ, ಬ್ಯಾಂಕ್ ದರೋಡೆ ಪ್ರಯತ್ನದ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನ ಮೇರೆಗೆ ಕಳ್ಳರ ದಸ್ತಗಿರಿಗೆ ನಾಕಾಬಂದಿ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಬಾಗಲಕೋಟೆ ತಾಲೂಕಿನ ರಾಂಪುರ ಕೆವಿಜಿಬಿ ಬ್ಯಾಂಕಿನ ಬೀಗ ಮುರಿದು ಬಂಗಾರ, ಹಣ ದೋಚಲು ಪ್ರಯತ್ನಿಸಿದ್ದ ಹಾಗೂ ಶಿರೂರಿನ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದ ಕಳ್ಳರ ತಂಡ ಬೇಟೆಯಾಡಿದ್ದಾರೆ.
  ಡಿ.೧೧ ರಂದು ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಪಿಎಸ್‌ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿ ರಾತ್ರಿ ಹೊನ್ನಾಕಟ್ಟಿ ಕ್ರಾಸ್ ಬಳಿ ನಾಕಾಬಂದಿ ಕರ್ತವ್ಯ ನಡೆಸುತ್ತಿದ್ದಾಗ ಮಧ್ಯರಾತ್ರಿ ೧.೨೫ ಗಂಟೆಗೆ ಬಾಗಲಕೋಟೆ ನವನಗರದ ಕಡೆಯಿಂದ ಬಂದ ಕಾರು ತಪಾಸಣೆ ನಡೆಸಲಾಗಿತ್ತು, ಅದರಲ್ಲಿ ಅಕ್ಷಿಜನ್ ಸಿಲಿಂಡರ್, ಅಡುಗೆ ಅನಿಲದ ಸಿಲಿಂಡರ್, ಗ್ಯಾಸ್ ಕಟ್ಟರ್, ಕಾರದ ಪುಡಿ, ಕಬ್ಬಿಣದ ರಾಡ್ ಸೇರಿ ವಿವಿಧ ವಸ್ತುಗಳು ಕಂಡು ಬಂದವು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ೫ ಜನರಲ್ಲಿ ಇಬ್ಬರು ಓಡಿ ಹೋಗಿದ್ದು. ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಗೆ ಒಳಪಡಿಸಿದಾಗ ವಿಜಯಪುರದ ಭರತ ಅಗರವಾಲ ಎಂಬಾತನ ಕುಮ್ಮಕ್ಕಿನಿಂದ ಶಿರೂರ ಕೆನರಾ ಬ್ಯಾಂಕ್ ಶಿರೂರ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದೇವೆ ಅಂತ ಒಪ್ಪಿಕೊಂಡಿದ್ದಾರೆ.
ಇನ್ನು ಆರೋಪಿತರನ್ನು ಮತ್ತಷ್ಟು ವಿಚಾರಿಸಲಾಗಿ ತಾವು ೮ ಜನ ಸೇರಿ ಕಳೆದ ಅ.೨೪ ರ ರಾತ್ರಿ ರಾಂಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬೀಗ ಮುರಿದು ಬಂಗಾರ ಮತ್ತು ಹಣ ದೋಚಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ.
ವಿಜಯಪುರದ ತನ್ವೀರ ಹುಸೇನಬಾಷಾ ಹೊನ್ನುಟಗಿ(೨೯), ರಮೇಶ ಲಕ್ಷ÷್ಮಣ ಕಾಳೆ(೫೭), ಪುಣೆಯ ವಸೀಂ ಮಸೂದ ಶೇಖ(೨೯) ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬಾಗಲಕೋಟೆ ನವನಗರದ ಚಾಂದಬಾಷಾ ಕಾಸೀಂಸಾಬ ಚಿತ್ತಾಪುರ, ನಿತೇಶ ಅಲಿಯಾಸ್ ನಿತ್ಯಾ ಸದಾನಂದ ನೀಲವಾಣಿ ಪರಾರಿಯಾಗಿದ್ದಾರೆ.
  ವಿಜಯಪುರದ ಭರತ ಸತ್ಯನಾರಾಯಣ ಅಗರವಾಲ ಸಹ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ರಾಂಪುರ ಬ್ಯಾಂಕ್ ಪ್ರಕರಣದಲ್ಲಿನ ಬಂಧಿತ ಆರೋಪಿತರಾದ ಬೆನಕಟ್ಟಿಯ ಹುಲಗಪ್ಪ ಗಂಗಪ್ಪ ಪಾತ್ರೋಟಿ, ರಾಂಪುರದ ನಾಗೇಶ ಊರ್ಫ ನಾಗ್ಯಾ ರಾಜಪ್ಪ ಇಂಗಳೆ ಸೇರಿ ೮ ಜನರ ಗ್ಯಾಂಗ್ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಪರಾಧ ಮಾಡಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಕಳ್ಳರ ತಂಡ ಬಂಧಿಸುವಲ್ಲಿ ಶ್ರಮವಹಿಸಿದ ಗ್ರಾಮೀಣ ಪಿಎಸ್‌ಐ ಶರಣಬಸಪ್ಪ ಸಂಗಳದ, ಸಿಬ್ಬಂದಿಗಳಾದ ಎಎಸ್‌ಐ ಎಂ.ಬಿ.ಬಳಬಟ್ಟಿ, ಎಂ.ಎA.ಸೋಲಾಪುರ, ಎಸ್.ಎಸ್.ನಡಗೇರಿ, ಎ.ಎಸ್.ಕಪಲಿ, ಪಿ.ವೈ.ಸೋರಕಟ್ಟಿ, ಎಂ.ಬಿ.ಗಣಾಚಾರಿ, ಎಂ.ಎಸ್.ಬೆAಡಿಗೇರಿಮಠ, ಪಿ.ಎಸ್.ಪಾಟೀಲ, ದುಂಡಪ್ಪ ಕಟಗೇರಿ, ಶಿವಯ್ಯ ಹಿರೇಮಠ,ಎನ್.ಎಂ.ಗುರಾಣಿ,ಕರಿಯಪ್ಪ ಮಗಡಾರ ಕಾರ್ಯಕ್ಷಮತೆಯನ್ನು ಪ್ರಶಂಸೆ ವ್ಯಕ್ತಪಡಿಸಿ ಎಸ್ಪಿ ಅಮರನಾಥ ರೆಡ್ಡಿ ಬಹುಮಾನ ಘೋಷಣೆ ಮಾಡಿದ್ದಾರೆ.