ಉಕ್ರೇನ್-ರಷ್ಯಾ ಯುದ್ಧ: ಇಂಟರ್ನೆಟ್ ಸಂಪರ್ಕ ಕಡಿತ ಪಾಲಕರಲ್ಲಿ ಆತಂಕ

ಉಕ್ರೇನ್ ನ ಕಾರ್ಕಿವ್ ಪ್ರದೇಶದಲ್ಲಿರುವ ಬಾಗಲಕೋಟೆ ಜಿಲ್ಲೆಯ ‌ ಕೆಲ ವಿದ್ಯಾರ್ಥಿಗಳ ಸಂಪರ್ಕ ಕಡಿತವಾಗಿದೆ.

ಉಕ್ರೇನ್-ರಷ್ಯಾ ಯುದ್ಧ: ಇಂಟರ್ನೆಟ್ ಸಂಪರ್ಕ ಕಡಿತ ಪಾಲಕರಲ್ಲಿ ಆತಂಕ

ನಾಡನುಡಿ ನ್ಯೂಸ್
ಬಾಗಲಕೋಟೆ:
ಉಕ್ರೇನ್ ರಾಜಧಾನಿ‌ ಕಿವ್ ಪ್ರದೇಶವನ್ನು ರಷ್ಯಾ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಬಾಗಲಕೋಟೆಯ ವಿದ್ಯಾರ್ಥಿಗಳ ಸಂಪರ್ಕವೂ ಕಡಿತಗೊಂಡಿದೆ.

ಬಾಗಲಕೋಟೆಯ ಸೀಮಿಕೇರಿ ವಿದ್ಯಾರ್ಥಿನಿ ಸ್ಪೂರ್ತಿ ಉಕ್ರೇನ್ ನ ಕಾರ್ಕಿವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಶುಕ್ರವಾರ ಬೆಳಗ್ಗೆಯಿಂದ ಸಂಪರ್ಕಕ್ಕೆ ಸಿಕ್ಕಿಲ್ಲ ಇದರಿಂದ ಸ್ಪೂರ್ತಿ ತಾಯಿ ಡಾ.ಗಂಗಾ ಆತಂಕಗೊಂಡಿದ್ದಾರೆ.

ಇಂಟರ್ನೆಟ್‌ ಸಂಪರ್ಕ ಕಡಿತಗೊಳ್ಳುವ ಬಗ್ಗೆ ಅಲ್ಲಿನ ಅಧಿಕಾರಿಗಳು ಮೊದಲೇ ಮಾಹಿತಿ ನೀಡಿದ್ದರು. ಅದರಂತೆ ಸದ್ಯಕ್ಕೆ ಸಂಪರ್ಕ ಕಡಿತಗೊಂಡಿದೆ.

ಕಾರ್ಕಿವ್ ನಲ್ಲಿ ಫ್ಲ್ಯಾಟ್ ವೊಂದರಲ್ಲಿ ವಾಸಿಸುತ್ತಿದ್ದ ಸ್ಪೂರ್ತಿ ಸೇರಿದಂತೆ ಕರ್ನಾಟಕದ ೯ ಜನರನ್ನು ಅಂಡರ್ ಗ್ರೌಂಡ್ ನ ಬಾಂಬ್ ಶೆಲ್ಟರ್ ಗೆ ಸ್ಥಳಾಂತರಿಸಲಾಗಿತ್ತು. ಆಕೆಯ ಸ್ನೇಹಿತ ಬಾಂಬ್ ಶೆಲ್ಟರ್ ಹೇಗಿರುತ್ತೆ ಎಂಬುದರ ವಿಡಿಯೋ ಕೂಡ ಮಾಡಿ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದ.

ಬಾಂಬ್ ಗಳ ಸದ್ದು ಕಡಿಮೆ ಆದಾಗ ಮೇಲೆ ಬಂದು ಮಾತನಾಡುತ್ತೇವೆ ಉಳಿದೆಲ್ಲ ಸಂದರ್ಭದಲ್ಲಿ ಶೆಲ್ಟರ್ ಗಳಲ್ಲೇ ಇರುತ್ತೇವೆ ಎಂದು ಸ್ಪೂರ್ತಿ ತನ್ನ ತಾಯಿಗೆ ತಿಳಿಸಿದ್ದರು.