ಬಾಗಲಕೋಟೆಯಲ್ಲಿ ಶುರುವಾಗಿದೆ ಆಪರೇಷನ್ ಪಿಗ್ 

ಬಾಗಲಕೋಟೆಯಲ್ಲಿ ಶುರುವಾಗಿದೆ  ಆಪರೇಷನ್ ಪಿಗ್ 

ನಾಡನುಡಿ ನ್ಯೂಸ್
ಬಾಗಲಕೋಟೆ:

ಬಾಗಲಕೋಟೆ ನಗರಸಭೆ ಬರೊಬ್ಬರಿ ೮ ಲೋಡ್ ಹಂದಿಗಳನ್ನು ಊರಿನಿಂದ ಹೊರಹಾಕಿದ್ದು, ಆಪರೇಷನ್ ಪಿಗ್ ಮುಂದವರಿಯಲಿದೆ ಎಂದು ಪೌರಾಯುಕ್ತ ಮುನಿಶಾಮಪ್ಪ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.

(ಸಾಂದರ್ಭಿಕ‌ ಚಿತ್ರ)

ನಗರದಲ್ಲಿ ನಾಯಿ, ಹಂದಿಗಳ ಕಾಟ ವಿಪರೀತವಾಗಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಹಂದಿಗಳನ್ನು ಊರಿನಿಂದ ಹೊರಗೆ ಕಳುಹಿಸುವ ಕೆಲಸವಾಗುತ್ತಿದೆ. ನಾಯಿಗಳನ್ನು ಮುಟ್ಟುವಂತ್ತಿಲ್ಲ ಎಂಬ ಆದೇಶವನ್ನು ಸುಪ್ರೀಂ ಕೋರ್ಟ್ ಮಾಡಿದೆ ಹೀಗಾಗಿ ಅವುಗಳು ವ್ಯಾಘ್ರಗೊಳ್ಳುವುದನ್ನು ತಡೆಯಲು ಸಂತಾನಹರಣ ಚಿಕಿತ್ಸೆ ಮಾಡಿಸಬಹುದು ಎಂದರು.

(ಸಾಂದರ್ಭಿಕ ಚಿತ್ರ)

ಈ‌ ಸಂದರ್ಭದಲ್ಲಿ ಪೌರಾಯುಕ್ತರು ಧ್ವನಿಗೂಡಿಸಿ ನಾಯಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಅದು ನ್ಯಾಯಾಲಯದ ಆದೇಶ ಉಲ್ಲಂಘನೆ ಆಗುತ್ತದೆ. ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆಗೆ ವೆಚ್ಚ ಭರಿಸಲು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದರು.

ಬಾಗಲಕೋಟೆಯಲ್ಲಿ ೮ ಲೋಡ್ ಹಂದಿಗಳನ್ನು ಹಿಡಿದು ಊರಿನಿಂದ ಹೊರಗೆ ಕಳುಹಿಸಲಾಗಿದೆ. ಇನ್ನೂ ಹಂದಿಗಳಿರುವ ಬಗ್ಗೆ ಸದಸ್ಯರು ಹೇಳಿರುವುದರಿಂದ ಅವುಗಳನ್ನೂ ಹೊರಹಾಕಲಾಗವುದು ಎಂದರು.