ಆಸ್ತಿ, ಸಾಲ ಎರಡರಲ್ಲೂ ಸಚಿವರಿಗಿಂತ ಪತ್ನಿ ಮೇಲುಗೈ..!
ಬಾಗಲಕೋಟೆ: ಸಚಿವ ಮುರುಗೇಶ ನಿರಾಣಿ ಅವರಿಗಿಂತಲೂ ಆಸ್ತಿ ಗಳಿಕೆ, ಸಾಲದ ವಿಚಾರದಲ್ಲಿ ಪತ್ನಿ ಕಮಲಾ ನಿರಾಣಿ ಅವರೇ ಮುಂದಿದ್ದಾರೆ.
ಮುರುಗೇಶ ನಿರಾಣಿ ಅವರು ಒಟ್ಟು ೨೭.೨೨ ಕೋಟಿ ರೂ.ಗಳ ಚರಾಸ್ತಿ ಹೊಂದಿದರೆ, ಪತ್ನಿ ಕಮಲಾ ನಿರಾಣಿ ಅವರು ೩೮.೫೫ ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಸಚಿವ ಮುರುಗೇಶ ಅವರು ೮.೬೦ ಕೋಟಿ ರೂ.ಗಳ ಸ್ಥಿರಾಸ್ತಿ ಹಾಗೂ ಪತ್ನಿ ಕಮಲಾ ನಿರಾಣಿ ಅವರು ೨೩.೮೫ ಕೋಟಿ ರೂ.ಗಳ ಸ್ಥಿರಾಸ್ತಿ, ಸಚಿವರು ೨೨.೬೨ ಕೋಟಿ ರೂ.ಗಳ ಸಾಲ ಹಾಗೂ ಪತ್ನಿ ಕಮಲಾ ಅವರು ೪೭.೫೬ ಕೋಟಿ ರೂ. ಸಾಲವನ್ನು ಹೊಂದಿದ್ದಾರೆ ಎಂದು ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರೂ ಹಲವು ಕಂಪನಿಗಳಲ್ಲಿ ಶೇರುಗಳನ್ನು ಹೊಂದಿದ್ದಾರೆ.