ಅಯೋಧ್ಯೆ ಪ್ರಾಣಪ್ರತಿಷ್ಠಾಪನೆ: ಪಿಎಚ್‌ಪಿ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ 

ಅಯೋಧ್ಯೆ ಪ್ರಾಣಪ್ರತಿಷ್ಠಾಪನೆ: ಪಿಎಚ್‌ಪಿ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ 
ಬಾಗಲಕೋಟೆ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರಾಣಪ್ರತಿಷ್ಠಾಪನೆ ನಿಮಿತ್ತ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರ ನೇತೃತ್ವದಲ್ಲಿ ಜ.೨೦ ರಿಂದ ಮೂರು ದಿನಗಳ ಕಾಲ ಸುಕ್ಷೇತ್ರ ತುಳಸಿಗೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಜ.೨೦ರ ಶನಿವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವರಿಗೆ ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಲೋಕಕಲ್ಯಾಣಾರ್ಥ ಸುಂದರಕಾAಡ ಪಾರಾಯಣ, ಪುಣ್ಯಹವಾಚನ, ದೇವತಾ ಸ್ಥಾಪನಾ, ಜಪ, ಮಹಾಮಂಗಳಾರತಿ,  ಪಂ.ಬಿAದುಮಾಧವಾಚಾರ್ಯ ನಾಗಸಂಪಿಗೆ ಅವರಿಂದ ರಾಮನ ಆದರ್ಶ ಮತ್ತು ಹನುಮನ ಭಕ್ತಿ ಕುರಿತಂತೆ ವಿಶೇಷ ಪ್ರವಚನವಿರಲಿದೆ. ನಂತರ ಮಹಾ ಪ್ರಸಾದದ ವ್ಯವಸ್ಥೆ ಇರಲಿದೆ ಎಂದು ಪಿ.ಎಚ್.ಪೂಜಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.೨೧ರ ಭಾನುವಾರ ಏಕಾದಶಿ ಪ್ರಯುಕ್ತ ಪಂಢರಪುರದ ವಾರಕರಿ ಸಂತರಿAದ ಭಜನೆ, ರಾಮನಾಮ ಜಪ, ಸಂಕೀರ್ತನೆಗಳು ಜರುಗಲಿವೆ. ಜ.೨೨ರ ಸೋಮವಾರ ಬೆಳಗ್ಗೆ ಮನ್ಯುಸೂಕ್ತ ವಾಯುಸ್ತುತಿ, ಪಂಚಾಮೃತ ಅಭಿಷೇಕ, ಪವಮಾನ ಪಾರಾಯಣ, ಅಲಂಕಾರ ನೈವೇದ್ಯ, ಮಹಾಮಂಗಳಾರತಿ, ಪ್ರಸಾದ ವಿತರಣೆ ಜತೆಗೆ ಕಲಾವಿದ ಜಯತೀರ್ಥ ತಾಸಗಾಂವ ಅವರಿಂದ ದಾಸವಾಣಿ, ರಾಮ ಸಂಕೀರ್ತನೆ, ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಬೇಕೆಂದು ಮನವಿ ಮಾಡಿದ್ದಾರೆ.