ಅಯೋಧ್ಯೆ ಪ್ರಾಣಪ್ರತಿಷ್ಠಾಪನೆ ದಿನದಂದ್ದೇ ಕೋಟೆಯಲ್ಲಿ ರಾಮ ಬಂಟ ಹನುಮನ ದೇಗುಲ ಲೋಕಾರ್ಪಣೆ

ಮಂತ್ರಾಲಯದ ನಂತರ ಉತ್ತರ ಕರ್ನಾಟಕದಲ್ಲೇ ದೊಡ್ಡದು ಎನ್ನಲಾದ ಭವ್ಯ ಶ್ರೀಪಂಚಮುಖಿ ಆಂಜನೇಯ ದೇವಸ್ಥಾನವು ಜ.೨೨ರಂದು ಲೋಕಾಪರ್ಣೆಗೊಳ್ಳಲಿದೆ ಮಂದಿರದೊಂದಿಗೆ ಸಮಾಜಮುಖಿ ಕೆಲಸಕ್ಕೂ ದೇವಸ್ಥಾನ ‌ಸಮಿತಿ‌ ಮುಂದಾಗಿದೆ.

ಅಯೋಧ್ಯೆ ಪ್ರಾಣಪ್ರತಿಷ್ಠಾಪನೆ ದಿನದಂದ್ದೇ ಕೋಟೆಯಲ್ಲಿ ರಾಮ ಬಂಟ ಹನುಮನ ದೇಗುಲ ಲೋಕಾರ್ಪಣೆ

ಬಾಗಲಕೋಟೆ:ಮುಚಖಂಡಿ ಕ್ರಾಸ್ ಬಳಿಯ ಕೆಂಪು ರಸ್ತೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಶ್ರೀಪಂಚಮುಖಿ ಆಂಜನೇಯ ದೇಗುಲವು ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನವಾದ ಜ.೨೨ರಂದು ಲೋಕಾರ್ಪಣೆಗೊಳ್ಳಿದೆ.


 ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದೇವಸ್ಥಾನದ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮಟಗಿ ಅವರು, ಜ.೧೮ರಂದು ದೇವಸ್ಥಾನ ಲೋಕಾರ್ಪಣೆ ಪೂರ್ವಭಾವಿಯಾಗಿ ಭವ್ಯ ಶೋಭಾಯಾತ್ರೆ ಜರುಗಲಿದೆ. ಕಿಲ್ಲಾದ ಕೊತ್ತಲೇಶ್ವರ ದೇವಸ್ಥಾನದಿಂದ ಯಾತ್ರೆ ಹೊರಡಲಿದ್ದು, ಬಸವೇಶ್ವರ ಸರ್ಕಲ್, ಮಹಾವೀರ ರಸ್ತೆöಮಾರ್ಗವಾಗಿ ಮುಚಖಂಡಿ ಕ್ರಾಸ್ ತಲುಪಲಿದೆ. ೬೫೦ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಾದ್ಯ ತಂಡಗಳು ಭಾಗವಹಿಸಲಿವೆ. ನಾಲ್ಕು ದಿನ ನಾನಾ ಪೂಜೆ, ಹೋಮ ನೆರವೇರಲಿದ್ದುö, ೨೨ ರಂದು ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಮಾಹಿತಿ ನೀಡಿದರು. 


  ರಾಯಚೂರು-ಬೆಳಗಾವಿ ಹೆದ್ದಾರಿ ಪಕ್ಕ ಬೇವಿನ ಮರದ ಅಡಿಯಲ್ಲಿ ಹನುಮಾನ್ ಮೂರ್ತಿಯಿತ್ತು. ರಸ್ತೆ ಅಗಲೀಕರಣಕ್ಕಾಗಿ ದೇವಸ್ಥಾನ ಸ್ಥಳಾಂತರಿಸಬೇಕಾಯಿತು. ಮುಚಖಂಡಿ ಕ್ರಾಸ್ ರಸ್ತೆಯ ಬಳಿ ದೇವಸ್ಥಾನ ಸ್ಥಾಪಿಸಲು ನಿರ್ಧರಿಸಲಾಯಿತು. ಇಲ್ಲಿ ಮಂಗವೊಂದು ಮೃತಪಟ್ಟ ನಂತರ ಸಂಸ್ಕಾರ ಕೈಗೊಳ್ಳಲಾಯಿತು. ಇದೇ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ನಿರ್ಧರಿಸಲಾಯಿತು ಎಂದು ಹೇಳಿದರು.
 ಭೂಮಿ ಹಾಗೂ ಕಾನೂನಿನ ಅಡೆತಡೆ, ಕೋವಿಡ್ ಕಾರಣದಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತು. ಇದೀಗ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣಗೊಂಡಿದೆ. ರವಿ ಕುಮಟಗಿಯವರು ಒಂದು ಎಕರೆ ಜಾಗೆಯನ್ನು ಗೋಶಾಲೆಗಾಗಿ ದಾನ ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ ಹಿಂದು ಧಾರ್ಮಿಕ ಪಾಠಶಾಲೆ ನಿರ್ಮಿಸುವ ಉದ್ದೇಶವಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನ ನಿರ್ಮಿಸುವ ಯೋಜನೆಯಿದೆ. ನಗರದ ಸಾರ್ವಜನಿಕರು, ಸಂಘ, ಸಂಸ್ಥೆಗಳ ನೆರವಿನಿಂದ ಈ ಧಾರ್ಮಿಕ ಕಾರ್ಯ ನೆರವೇರಿದೆ. ಅಂದು ನಡೆಯುವ ಸಮಾರಂಭಕ್ಕೆ ಎಲ್ಲರೂ ಆಗಮಿಸಬೇಕು ಎಂದರು.


 ಜ.೨೨ ರಂದು ಪ್ರಾಣ ಪ್ರತಿಷ್ಠಾಪನೆ, ಲೋಕಾರ್ಪಣೆ ಸಮಾರಂಭ ಬೆಳಗ್ಗೆ ೧೧ಕ್ಕೆ ನಡೆಯಲಿದೆ. ಕಲಬುರಗಿಯ ಜಡೆಯ ಶಾಂತಲಿಂಗ ಮಹಾಸ್ವಾಮೀಜಿ, ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ಕಮತಗಿಯ ಹುಚ್ಚೇಶ್ಚರ ಶ್ರೀಗಳು, ಗುಳೇದಗುಡ್ಡದ ಡಾ.ನೀಲಕಂಠ ಶಿವಾಚಾರ್ಯರು, ಕೊಣ್ಣೂರನ ಡಾ.ಶಿವಕುಮಾರ ಶಿವಾನಂದ ಶ್ರೀö, ಹಿರಿಯ ವಿದ್ವಾಂಸ ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ, ಗದ್ದನಕೇರಿಯ ಮೌನೇಶ್ವರ ಸ್ವಾಮಿ ಮಹಾಪುರುಷರು ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಉದ್ಘಾಟಿಸಲಿದ್ದಾರೆ. ಶಾಸಕ ಎಚ್.ವೈö.ಮೇಟಿ, ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸಚಿವರಾದ ಮುರಗೇಶ ನಿರಾಣಿ, ಎಸ್.ಆರ್.ಪಾಟೀಲ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
 ದೇವಸ್ಥಾನ ಸಮಿತಿ ಉಪಾಧ್ಯಕ್ಷ ಎಂ.ಆರ್.ಶಿಂಧೆ, ಪದಾಧಿಕಾರಿಗಳಾದ ಸಂತೋಷ ಹೊಕ್ರಾಣಿ, ಅಶೋಕ ಮುತ್ತಿನಮಠ, ಅರುಣ ಲೋಕಾಪೂರ ಇದ್ದರು.