ಕೋಟೆನಗರಿಗೂ ವಾರದಲ್ಲಿ ಎರಡೇ ದಿನ ಕುಡಿಯುವ ನೀರು..!

ಕೋಟೆನಗರಿಗೂ ವಾರದಲ್ಲಿ ಎರಡೇ ದಿನ ಕುಡಿಯುವ ನೀರು..!

ಬಾಗಲಕೋಟೆ : ಬಾಗಲಕೋಟೆ, ನವನಗರಕ್ಕೆ ಬನ್ನಿದಿನ್ನಿ ಬ್ಯಾರೇಜ್‌ನಿಂದ ಇಲ್ಲಿಯವರೆಗೆ ಶುದ್ದೀಕರಣ ಮಾಡಿ ವಾರಕ್ಕೆ ಮೂರು ಸಲ ನೀರು ಸರಬರಾಜು ಮಾಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಮಳೆಯಾಗದ ಕಾರಣ ಘಟಪ್ರಭಾ ನದಿಯ ನೀರಿನ ಹರಿವು ಕಡಿಮೆಯಾಗಿದ್ದು, ಸದ್ಯ ಬನ್ನಿದಿನ್ನಿ ಬ್ಯಾರೇಜನಲ್ಲಿ ನೀರಿನ ಸಂಗ್ರಹಣೆ ತುಂಬಾ ಕಡಿಮೆಯಾಗಿದ್ದರಿಂದ ಇನ್ನು ಮುಂದೆ ನೀರನ್ನು ವಾರಕ್ಕೆ ಎರಡು ಸಲ ಬಿಡಲಾಗುವುದು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿಕೊಂಡು ಪ್ರಾಧಿಕಾರದೊಂದಿಗೆ ಸಹಕರಿಸುವಂತೆ ಬಿಟಿಡಿಎ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.