ಪಂಚಮಸಾಲಿ ೩ನೇ ಪೀಠ:ಫೆ.೧೩ರಂದೇ ಪಟ್ಟಾಭಿಷೇಕಕ್ಕೆ ತೀರ್ಮಾನ..!

ಪಂಚಮಸಾಲಿ‌ ಮೂರನೇ ಪೀಠಕ್ಕೆ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಸ್ವಾಮೀಜಿ‌ ಅವರನ್ನು‌ ಜಗದ್ಗುರುಗಳಾಗಿ ಆಯ್ಕೆ ಮಾಡಲಾಗಿದ್ದು, ಫೆ.೧೩ರಂದು ಪಟ್ಟಾಭಿಷೇಕ ಕಾರ್ಯಕ್ರಮ ಜರುಗಲಿದೆ.

ಪಂಚಮಸಾಲಿ ೩ನೇ ಪೀಠ:ಫೆ.೧೩ರಂದೇ ಪಟ್ಟಾಭಿಷೇಕಕ್ಕೆ ತೀರ್ಮಾನ..!

ಬಾಗಲಕೋಟೆ:
ಪಂಚಮಸಾಲಿ ಮೂರನೇ ಪೀಠದ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಫೆ.೧೪ರ ಬದಲಾಗಿ ಫೆ.೧೩ರಂದೇ ಆಯೋಜಿಸಲು ತೀರ್ಮಾನಿಸಲಾಗಿದೆ.

ಜಮಖಂಡಿ ತಾಲೂಕಿನ ಆಲಗೂರದ ಧರಿದೇವರ ಮಠದಲ್ಲಿ ಹರಿಹರಪೀಠದ ಶ್ರೀವಚನಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

 ಫೆ.೧೪ರಿಂದ ಅಧಿವೇಶನ ಆರಂಭಗೊಂಡಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ‌ ನಾಯಕ‌ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವುದು ಕಷ್ಟವಾಗುತ್ತದೆ ಹೀಗಾಗಿ‌‌ ಒಂದು ದಿನ‌ ಮುಂಚಿತವಾಗಿಯೇ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂರನೇ ಪೀಠದ ಜಗದ್ಗುರುಗಳಾಗಲಿರುವ, ಒಕ್ಕೂಟದ ಅಧ್ಯಕ್ಷ ಬಬಲೇಶ್ವರ ಬೃಹನ್ಮಠದ ಶ್ರೀ ಮಹಾದೇವ ಸ್ವಾಮೀಜಿ, ಒಕ್ಕೂಟದ ಕಾರ್ಯದರ್ಶಿ ಮನಗೂಳಿಯ ಸಂಗನಬಸವ ಸ್ವಾಮೀಜಿ, ಬೆಂಡವಾಡ ಮಠದ ಶ್ರೀರೇವಣಸಿದ್ದೇಶ್ವರ ಸ್ವಾಮೀಜಿ ಸೇರಿ ಹಲವರು ಪಾಲ್ಗೊಂಡಿದ್ದರು.