CRIME: ಶೆಡ್ಡಿಗೆ ಬೆಂಕಿ ಇಬ್ಬರ ಸಜೀವ ದಹನ, ಮೂವರಿಗೆ ಗಂಭೀರ ಗಾಯ

CRIME: ಶೆಡ್ಡಿಗೆ ಬೆಂಕಿ ಇಬ್ಬರ ಸಜೀವ ದಹನ, ಮೂವರಿಗೆ ಗಂಭೀರ ಗಾಯ

ಬಾಗಲಕೋಟೆ:
ಶೆಡವೊಂದರಲ್ಲಿ ಮೋಟಾರ್ ಮೂಲಕ ಪೆಟ್ರೋಲ್ ಸಿಂಪಡಿಸಿ ಬೆಂಕಿ ಹಚ್ಚಿರುವ ಘಟನೆ ಮುಧೋಳ ತಾಲೂಕಿನ ಅಕ್ಕಿಮರಡಿಯಲ್ಲಿ ಜರುಗಿದೆ. ಘಟ‌ನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ತಾಯಿ-ಮಗಳು ಸಜೀವ ದಹನವಾಗಿದ್ದಾರೆ.

ಜೈಬಾನ್(೫೫) ಶಬಾನ್ (೨೫) ಮೃತ ದುರ್ದೈವಿಗಳು. ದಸ್ತಗೀರಸಾಬ್, ಸುಬಾನ್ ಹಾಗೂ ಸಿದ್ಧಿಕಿ ಎಂಬುವವರಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ಪಿ ವೈ.ಅಮರನಾಥ ರೆಡ್ಡಿ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಘಟನೆ ಜರುಗಿದೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.