ಡಿಸಿಪಿ ಎಂದು ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ಪೊಲೀಸ್ ಅತಿಥಿ.!

ಡಿಸಿಪಿ ಎಂದು ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ಪೊಲೀಸ್ ಅತಿಥಿ.!


ಬಾಗಲಕೋಟೆ: ತಾನು ಸಿಬಿಐ ಅಧಿಕಾರಿ, ಡಿಸಿಪಿ ಎಂದೆಲ್ಲ ಜನರನ್ನು ಬೆದರಿಸುತ್ತಿದ್ದ ರಬಕವಿ ಬನಹಟ್ಟಿ ತಾಲೂಕಿನ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. 


 ರಬಕವಿ ಬನಹಟ್ಟಿ ತಾಲೂಕಿನ ಅಪ್ಪು ಬಸಯ್ಯ ಹಿರೇಮಠ ಬಂಧಿತ ಆರೋಪಿ. ಬಹುತೇಕ ಪೊಲೀಸ್ ಇಲಾಖೆ ಮೊಬೈಲ್ ಸಂಖ್ಯೆ ೯೪೮೦೮೦ದಿಂದ ಆರಂಭವಾಗುತ್ತವೆ. ಜನರನ್ನು ಸುಲಿಗೆ ಮಾಡಲು ಈತ ಅಂಥದೇ ನಂಬರ್ ಪಡೆದುಕೊಂಡು ಕರೆ ಮಾಡಿ ಜನರನ್ನು ಬೆದರಿಸುತ್ತಿದ್ದ. ಈತನ ವಿರುದ್ಧ ಶಿವಮೊಗ್ಗ, ಬೆಳಗಾವಿ, ಜಮಖಂಡಿಯಲ್ಲಿ ದೂರುಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಬನಟಹಟ್ಟಿ ಠಾಣೆಯಲ್ಲಿ ಈತನ ವಿರುದ್ಧ ಕಲಂ ೨೦೪, ೩೧೮(೨), ೩೧೯(೨), ೩೫೨ ಬಿಎನ್‌ಎಸ್ ಅಡಿ ಪ್ರಕರಣ ದಾಖಲಾಗಿದೆ.