ಈಗ ಎಲ್ಲಿ ನೋಡಿದರೂ ಹೌದ್ದ ಹುಲಿಯಾ ಗುಂಗು 

        ಈಗ ಎಲ್ಲಿ ನೋಡಿದರೂ ಹೌದ್ದ ಹುಲಿಯಾ ಗುಂಗು 


ಬಾಗಲಕೋಟೆ:ನಗರದ ಪಕ್ವಾನ್ ಸಮೂಹದ ಮಾಲೀಕ ಪವನ್ ಸೀಮಿಕೇರಿ ಹಾಗೂ ಸಿಂಧು ಹಯವದನ ಅವರು ನಿರ್ಮಿಸಿರುವ "ಎಲ್ಲೋ ಜೋಗಪ್ಪ ನಿನ್ನರಮನೆ" ಚಲನ ಚಿತ್ರದ ಹೌದ ಹುಲಿಯಾ ಗೀತೆ ಬುಧವಾರ ಬಿಡುಗಡೆಗೊಂಡಿದೆ.
 ಈಗಾಗಲೇ ಚಿತ್ರದ ಹಾಡಿನ ಹಕ್ಕುಗಳನ್ನು ಜಂಕಾರ್ ಮ್ಯೂಸಿಕ್‌ನವರು ಖರೀದಿಸಿದ್ದು, ಚಿತ್ರದ ಮೊದಲ ಹಾಡನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಬಿಡುಗಡೆಗೊಳಿಸಿದರು. ರವೀಂದ್ರ ಮುದ್ದಿ ಗೀತ ರಚನೆಕಾರರಾಗು ಕೆಲಸ ಮಾಡಿದ್ದು, ಹಾಡಿಗೆ ರವೀಂದ್ರ ಸೋರಗಾಂವಿ, ವಿಶಾಕ್ ನಾಗಲಾಪುರ, ಶಿಯೋಂ ಅವರು ಧ್ವನಿಯಾಗಿದ್ದಾರೆ. ಶಿಯೋಂ ಅವರ ಸಂಗೀತ ನಿರ್ದೇಶನವಿದೆ.
 ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರವು ಕನ್ನಡದಲ್ಲಿ ವಿಭಿನ್ನ ಕಥಾಹಂದರವೊAದಿದ ಚಿತ್ರವಾಗಿದೆ. ನುರಿತ ನಿರ್ದೇಕರು, ಕಲಾವಿದರ ಚಿತ್ರವನ್ನು ಕನ್ನಡಿಗರು ಪ್ರೋತ್ಸಾಹಿಸಬೇಕೆಂದು ಯೋಗರಾಜ್ ಭಟ್ ಅವರು ಈ ಸಂದರ್ಭದಲ್ಲಿ ಹೇಳಿದರು.